ಇತ್ತೀಚಿನ ಸುದ್ದಿ
ಬಾಳ್ತಿಲ ನೀರಪಾದೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಶಿಲಾನ್ಯಾಸ
21/06/2023, 20:31

ಬಂಟ್ವಾಳ(reporterkarnata.com): ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಟ್ರಸ್ಟ್ (ರಿ) ಹಾಗೂ ಬಂಟ್ವಾಳ ಬಾಳ್ತಿಲ ನೀರಪಾದೆ ಜೀರ್ಣೋದ್ಧಾರ ಸೇವಾ ಸಮಿತಿ ವತಿಯಿಂದ ಬುಧವಾರ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ನಿಡ್ಯೆ ಅವರ ಮುಂದಾಳತ್ವ ದಲ್ಲಿ ಕೇಶವ ಶಾಂತಿಯವರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಾರಾಯಣ ಗುರು ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಬಾಳ್ತಿಲ ನೀರಪಾದೆಯಲ್ಲಿ ನೆರೆವೇರಿತು.
ಅತಿಥಿಗಳಾಗಿ ಸಮಿತಿಯ ಗೌರವಾಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಸೂರ್ಯನಾರಾಯಣ ಭಟ್ ಕಲಾಶ್ರಯ ದಾಸಕೋಡಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,
ಸ್ಥಳದಾನಿ ಡೀಕಯ್ಯ ಪೂಜಾರಿ ಕಟ್ಟದ ಮೂಡು’ ರಾಧಾಕೃಷ್ಣ ಅಡ್ಯಂತಾಯ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ಹಿರಣ್ಮಯಿ ಗೋಪಾಲ ಶೆಣೈ, ಟ್ರಸ್ಟಿನ ಕಾರ್ಯದರ್ಶಿ ಮೋಹನ್ ಪಿ. ಎಸ್. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯರಾಮ್ ಕಲ್ಲಪಾಪು, ಆರ್ಥಿಕ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ತೋಟ, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಕಾಂದಿಲ, ಉಪಾಧ್ಯಕ್ಷರುಗಳಾದ ಶರತ್ ಪೂಜಾರಿ ಸೇನೆರೆಕೋಡಿ, ಶಿವರಾಜ್ ಕಾಂದಿಲ, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಪೂಜಾರಿ ಶೇಡಿಗುರಿ, ನೋಣಯ್ಯ ಪೂಜಾರಿ ಕಟ್ಟಡಮೂಡು, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.