1:01 PM Wednesday17 - December 2025
ಬ್ರೇಕಿಂಗ್ ನ್ಯೂಸ್
Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ…

ಇತ್ತೀಚಿನ ಸುದ್ದಿ

ಬಳ್ಳಾರಿಯ ಕ್ರೈಸ್ತ ಧರ್ಮ ಕ್ಷೇತ್ರಕ್ಕೆ ಅಮೃತ ಮಹೋತ್ಸವದ ಸಂಭ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

27/11/2024, 09:09

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ರಾಯಚೂರು, ಕೊಪ್ಪಳ, ಕಲಬುರಗಿಯನ್ನು ಒಳಗೊಂಡು ಬಳ್ಳಾರಿ ಕೇಂದ್ರಿತವಾಗಿ 1949ರಲ್ಲಿ ರಚನೆಯಾದ ಕ್ರೈಸ್ತ ಧರ್ಮ ಕ್ಷೇತ್ರ (ಡಯಾಸಿಸ್‌) ಅಮೃತ ಮಹೋತ್ಸವ ಸಂಭ್ರಮದಲ್ಲಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಅತಿಥಿಯಾಗಿ ಆಗಮಿಸುವರು.
ಮದ್ರಾಸ್‌ನ ಕ್ರೈಸ್ತ ಧರ್ಮ ಕ್ಷೇತ್ರದ ಭಾಗವಾಗಿದ್ದ ಬಳ್ಳಾರಿಯು 1949 ಮಾರ್ಚ್ 10ರಲ್ಲಿ ವಿಭಜನೆಗೊಂಡಿತು. ಆ ಮೂಲಕ ಪ್ರತ್ಯೇಕ ಧರ್ಮಕ್ಷೇತ್ರವಾಗಿ ಗುರುತಿಸಿಕೊಂಡಿತು. ಹೀಗೆ ರಚನೆಯಾದ ಬಳ್ಳಾರಿ ಧರ್ಮ ಕ್ಷೇತ್ರಕ್ಕೆ ಜಾನ್ ಹೋಗನ್ ಎಂಬುವವರನ್ನು ಮೊದಲು ಬಿಷಪ್ ಆಗಿ ನೇಮಿಸಲಾಗಿತ್ತು. ಅವರು ಇಂಗ್ಲೆಂಡ್‌ನವರಾಗಿದ್ದರು. ಆ ಬಳಿಕ ಆಂಬ್ರೋಸ್‌ ಎಂಬುವವರು ಬಿಷಪ್‌ ಆಗಿದ್ದರು. ಅವರು ಚೆನ್ನೈನವರಾಗಿದ್ದರು. ನಂತರ, ಕೊಡಗಿನ ವೀರಾಜಪೇಟೆಯ ಜೋಸೆಫ್‌ ಡಿಸಿಲ್ವ ಬಿಷಪ್‌ ಆದರು. ಸದ್ಯ 16 ವರ್ಷಗಳಿಂದ ಮಂಗಳೂರಿನ ಹೆನ್ರಿ ಡಿಸೋಜಾ ಅವರು ಬಿಷಪ್‌ ಆಗಿದ್ದಾರೆ.
ಸದ್ಯ ಬಳ್ಳಾರಿ ಕ್ರೈಸ್ತ ಧರ್ಮ ಕ್ಷೇತ್ರದ ಅಡಿಯಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ ಜಿಲ್ಲೆಗಳು ಇದ್ದವು. ಈಗ ವಿಜಯನಗರ ಹೊಸದಾಗಿ ಸೇರ್ಪಡೆಯಾಗಿದ್ದರೆ, ಕಲಬುರಗಿ ಪ್ರತ್ಯೇಕವಾಗಿದೆ. ಬಳ್ಳಾರಿ ಧರ್ಮಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಧರ್ಮ ಗುರುಗಳಿದ್ದಾರೆ ಎನ್ನುವ ಮಾಹಿತಿ ಇದೆ.
*ಅಮೃತ ಮಹೋತ್ಸವಕ್ಕೆ ಸಿಎಂ:* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.27 ರಂದು ಬಳ್ಳಾರಿ ಪ್ರವಾಸ ಕೈಗೊಂಡಿದ್ದು 4.30ಕ್ಕೆ ಬಳ್ಳಾರಿಯ ಆರೋಗ್ಯ ಮಾತೆ ಚರ್ಚ್‌ನಲ್ಲಿ ನಡೆಯಲಿರುವ ಕ್ರೈಸ್ತ ಧರ್ಮ ಕ್ಷೇತ್ರದ ಅಮೃತ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು