ಇತ್ತೀಚಿನ ಸುದ್ದಿ
ಬಲ್ಲಾಳರಾಯ ದುರ್ಗ: ಚಾರಣಕ್ಕೆ ಬಂದು ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಯುವಕ ಪತ್ತೆ: 3 ತಾಸಿಗೂ ಅಧಿಕ ಶೋಧ ಕಾರ್ಯಾಚರಣೆ
27/02/2024, 14:36
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಾಳೂರು ಠಾಣಾ ವ್ಯಾಪ್ತಿಯ ಬಲ್ಲಾಳರಾಯ ದುರ್ಗ ಹಾಗೂ ಭಂಡಾಜೆ ಫಾಲ್ಸ್ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕ ಧನುಷ್ ಕಾಡಿನ ಮಧ್ಯೆ ಪತ್ತೆಯಾಗಿದ್ದಾನೆ.
ನಾಪತ್ತೆಯಾಗಿದ್ದ ಯುವಕನ
ಗೆಳೆಯರು ಸುಂಕ ಸಾಲೆ ಗ್ರಾಮಕ್ಕೆ ಬಂದು ಆದಿತ್ಯ ಎಂಬ ಯುವಕ 112 ಪೊಲೀಸ್ ವಾಹನಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದ. ಕೆಎಂಸಿ ಆಸ್ಪತ್ರೆಯಲ್ಲಿ MBBS ಅಭ್ಯಾಸ ಮಾಡುತ್ತಿದ್ದು 10 ಮಂದಿ ಗೆಳೆಯರು ಭಂಡಾಜೆ ಫಾಲ್ಸ್ ನೋಡಲು ಬಂದಿದ್ದರು. ಅದರಲ್ಲಿ ಧನುಷ್ ಎಂಬಾತನು ಸುಮಾರು 8 ಕಿಮೀ ಕಾಡಿನ ಮಧ್ಯದಲ್ಲಿ ಕಾಣೆಯಾಗಿದ್ದ. ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪೊಲೀಸರು ಸ್ಥಳಕ್ಕೆ ಹೋಗಿ ಆಲಿದ್ಧಾಂತಹ ಹುಡುಗರನ್ನು ವಿಚಾರಿಸಲಾಗಿ ಆತನು ತಪ್ಪಿಕೊಂಡಿರುವ ನಿರ್ದಿಷ್ಟ ಸ್ಥಳವನ್ನು ಸೂಚಿಸಿದ ಸುಮಾರು ಮೂರುವರೆ ತಾಸು ಶೋಧ ಕಾರ್ಯಾಚರಣೆ ನಡೆಸಿ ನಾಪತ್ತೆಯಾಗಿದ್ದ ಯುವಕನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಕ ಕೊನೆಗೆ ಗುಡ್ಡದ ಪ್ರದೇಶದಲ್ಲಿ ಸುಮಾರು 700 ಅಡಿ ಕೆಳಗೆ ದಟ್ಟವಾದ ಅರಣ್ಯ ಮದ್ಯದಲ್ಲಿ ದಲ್ಲಿ ಒಬ್ಬನೇ ಸಿಕ್ಕಿಕೊಂಡು ನಿಂತಿರುವುದು ಕಂಡು ಬಂತು. ಪೊಲೀಸರು ಬರುವುದನ್ನು ಕಂಡು ಯುವಕ ಓಡೋಡಿ ಬಂದ. ನಂತರ ಶೋಧ ತಂಡದವರು ಆತನಿಗೆ ಧೈರ್ಯ ತುಂಬಿ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿ ಆತನನ್ನು ವಾಹನದ ಬಳಿಗೆ ಕರೆದು ತಂದರು. ನಂತರ ಆತನ ತಂದೆ ತಾಯಿ ಗಳಿಗೆ ಕರೆ ಮಾಡಿಸಿ ಮಾಹಿತಿ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮೆಹಬೂಬ್ ಸಾಧನಿ, ಶಂಕರ್ ಬೋವಿ ಹಾಗೂ ಸ್ಥಳೀಯರು ಇದ್ದರು.