ಇತ್ತೀಚಿನ ಸುದ್ದಿ
ಬಾಳೆಹೊನ್ನೂರು ಸಮೀಪ ಗೃಹಿಣಿಯ ಭೀಕರ ಕೊಲೆ: 5 ತಾಸಿನೊಳಗೆ ಆರೋಪಿ ವಾಟ್ಸಾಪ್ ಗೆಳೆಯನ ಬಂಧನ
07/12/2024, 22:51

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಬಾಳೆಹೊನ್ನೂರಿನ ಕಿಚ್ಚಬ್ಬಿ ಗ್ರಾಮದಲ್ಲಿ 25ರ ಹರೆಯದ ಗೃಹಿಣಿಯನ್ನು ಕೊಲೆ ಮಾಡಿದ ವಾಟ್ಸಾಪ್ ಗೆಳೆಯನನ್ನು ಪ್ರಕರಣ ನಡೆದ 5 ತಾಸಿನೊಳಗೆ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿ ಕಾಡಿನೊಳಗೆ ಅವಿತು ಕುಳಿತಿದ್ದ ಆರೋಪಿ ಚಿರಂಜೀವಿಯನ್ನು ಘಟನೆ ನಡೆದ ಸ್ಥಳದಿಂದ 6 ಕಿ.ಮೀ. ದೂರದ ಕಾಡಿನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಾಳೆಹೊನ್ನೂರಿನ ಗಡಿಗೇಶ್ವರ ಬಳಿ ಆರೋಪಿಯ ಬಂಧನಕ್ಕೀಡಾಗಿದ್ದಾನೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.