ಇತ್ತೀಚಿನ ಸುದ್ದಿ
ಭಕ್ತನೊಬ್ಬನಿಂದ ದೇವರಿಗೆ ಪತ್ರ!: ಕಳಸ ತಾಲೂಕಿನ ಕಳಸೇಶ್ವರ ದೇಗುಲದ ಹುಂಡಿಯಲ್ಲಿ ಪತ್ತೆ!
24/09/2022, 19:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸೇಶ್ವರ ದೇವರಿಗೆ ಭಕ್ತನೊಬ್ಬ ವಿಚಿತ್ರ ಪತ್ರವೊಂದು ಬರೆದಿರುವುದು ಬೆಳಕಿಗೆ ಬಂದಿದೆ.
ಕಳಸೇಶ್ವರ ಸ್ವಾಮಿ ದೇಗುಲದ ಹುಂಡಿಯಲ್ಲಿ ಪತ್ರ ಪತ್ತೆಯಾಗಿದೆ.
ತಾಯಿ ನಮ್ಮವ್ವ, ರಮೇಶ್-ಮಂಜುಳ ಸಂಬಳವನ್ನ ರಾಜಮ್ಮನ ಕೈಗೆ ಕೊಡಲಿ. ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು. ಐಶ್ವರ್ಯ ಬೇಗ ದಪ್ಪ ಆಗಿ, ದೃಷ್ಠಿಯಾಗಿ ಕಾಣುವಂತೆ ಮಾಡು ಎಂದು ಮಾರಮ್ಮನಿಗೆ ಭಕ್ತ ಪತ್ರ ಬರೆದಿದ್ದಾನೆ.
ಮಂಜುಳಾ ಅತ್ತೆ-ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು. ಮಂಜುಳ ಮನಸ್ಸಿನಲ್ಲಿ ರಾಜಮ್ಮ, ಬಸವರಾಜುನನ್ನ ಒಳ್ಳೆಯವರಾಗಿಸು
ದೇವರಾಜುಗೆ ಕೈತುಂಬಾ ಸಂಬಳ ಸಿಗುವ ಸರ್ಕಾರಿ ಕೆಲಸ ಕೊಡಿಸು.ದೇವರಿಗೆ ವಿಚಿತ್ರವಾಗಿ ಪತ್ರ ಬರೆದು ಭಕ್ತ ಬೇಡಿಕೊಂಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಳಸೇಶ್ವರ ದೇವಾಲಯ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ.