10:25 PM Monday29 - December 2025
ಬ್ರೇಕಿಂಗ್ ನ್ಯೂಸ್
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಇತ್ತೀಚಿನ ಸುದ್ದಿ

ಬಜಾಜ್ ಫಿನ್‍ಸರ್ವ್ ವತಿಯಿಂದ ವಯನಾಡ್ ಭೂಕುಸಿತ ಪರಿಹಾರಕ್ಕೆ 2 ಕೋಟಿ ರೂ. ದೇಣಿಗೆ

26/09/2024, 20:07

ಬೆಂಗಳೂರು(reporterkarnataka.com): ಭಾರತದ ಪ್ರಮುಖ ಮತ್ತು ವೈವಿಧ್ಯಮಯ ಹಣಕಾಸು ಸೇವಾ ಗುಂಪುಗಳಲ್ಲಿ ಒಂದಾದ ಬಜಾಜ್ ಫಿನ್‍ಸರ್ವ್ ಲಿಮಿಟೆಡ್, ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತ ಭೂಕುಸಿತ ಮತ್ತು ಪ್ರವಾಹದಿಂದ ಹಾನಿಗೊಳಗಾದ ಸಮುದಾಯಗಳಿಗೆ ಬೆಂಬಲವಾಗಿ 2 ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.
ವಯನಾಡ್ ಭೂಕುಸಿತ ಪರಿಹಾರಕ್ಕಾಗಿ ಕೇರಳ ರಾಜ್ಯ ವಿಪತ್ತು ಪರಿಹಾರ ನಿಧಿಗೆ ಆನ್‍ಲೈನ್ ಕೊಡುಗೆಯನ್ನು ಕೇರಳದ ಗೌರವಾನ್ವಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ​ಬಜಾಜ್ ಫಿನ್‍ಸರ್ವ್ ​ಕಾರ್ಪೊರೇಟ್​ ವ್ಯವಹಾರಗಳ ವಿಭಾಗದ ಅಧ್ಯಕ್ಷ ಡಾ. ಎನ್. ಶ್ರೀನಿವಾಸ ರಾವ್ ಮತ್ತು ಬಜಾಜ್ ಅಲಿಯಾನ್ಸ್ ಇನ್ಶೂರೆನ್ಸ್‍ನ ಕಾನೂನು ಮತ್ತು ಅನುಸರಣೆ ಹಿರಿಯ ಅಧ್ಯಕ್ಷ ಅನಿಲ್ ಪಿ.ಎಂ. ಅವರ ಜತೆ ನಡೆಸಿದ ಸಭೆಯ ವೇಳೆ ಇದನ್ನು ಘೋಷಿಸಲಾಯಿತು.
ಬಜಾಜ್ ಅಲೈನ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಬಜಾಜ್ ಅಲೈನ್ಸ್ ಜನರಲ್ ಇನ್ಶೂರೆನ್ಸ್, ವಯನಾಡ್‍ನಲ್ಲಿ ಪ್ರಭಾವಿತವಾಗಿರುವ ಗ್ರಾಹಕರು ಸಲ್ಲಿಸಿದ ಎಲ್ಲಾ ಕ್ಲೈಮ್‍ಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿವೆ.
ಬಜಾಜ್ ಫಿನ್‍ಸರ್ವ್‍ನ ಸಾಲ ನೀಡುವ ಅಂಗಸಂಸ್ಥೆಯಾದ ಬಜಾಜ್ ಫೈನಾನ್ಸ್, ಸದ್ಭಾವನೆ ಮತ್ತು ಮಾನವೀಯ ಸೂಚಕವಾಗಿ ವಯನಾಡ್‍ನಿಂದ ಗ್ರಾಹಕರಿಗೆ ಎಲ್ಲ ಸಾಲ ಮರುಪಾವತಿಯ ಮೇಲೆ ಸ್ವಯಂಪ್ರೇರಿತ ನಿಷೇಧವನ್ನು ಘೋಷಿಸಿದೆ. ವಯನಾಡಿನ ಪುಂಜಿರಿಮಟ್ಟಂ, ಮುಂಡಕ್ಕಲ್, ಚೂರಲ್ಮಾಲಾ, ಅಟ್ಟಮಾಲ, ಮೆಪ್ಪಾಡಿ ಮತ್ತು ಕುನ್ಹೋಮ್ ಗ್ರಾಮಗಳಲ್ಲಿ ವಾಸಿಸುವ ಗ್ರಾಹಕರಿಗೆ ಚಾಲ್ತಿಯಲ್ಲಿರುವ ನಿಷೇಧವು ಅನ್ವಯಿಸುತ್ತದೆ.
ಬಜಾಜ್ ಫಿನ್‍ಸರ್ವ್‍ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಅಧ್ಯಕ್ಷ ಡಾ. ಎನ್. ಶ್ರೀನಿವಾಸ ರಾವ್, “ನಮ್ಮ ಸಾಮಾಜಿಕ ಪರಿಣಾಮದ ಕಾರ್ಯಕ್ರಮಗಳು ಸಮಾಜದ ಅತ್ಯಂತ ತುರ್ತು ಅಗತ್ಯಗಳನ್ನು ಪರಿಹರಿಸುವಲ್ಲಿ ಕೇಂದ್ರೀಕೃತವಾಗಿವೆ. ವಯನಾಡ್ ಭೂಕುಸಿತವು ನಿವಾಸಿಗಳ ಮನೆಗಳು, ಜೀವನ ಮತ್ತು ಜೀವನೋಪಾಯವನ್ನು ಮುಳುಗಿಸಿದೆ. ವಯನಾಡ್ ಪರಿಹಾರ ನಿಧಿಗೆ ಈ ಕೊಡುಗೆ ಮತ್ತು ಬಜಾಜ್ ಫಿನ್‍ಸರ್ವ್ ಕಂಪನಿಗಳು ಕೈಗೊಂಡ ವಿವಿಧ ಉಪಕ್ರಮಗಳೊಂದಿಗೆ, ನಾವು ಪ್ರಭಾವಿತರಿಗೆ ಅರ್ಥಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಭಾವಿಸುತ್ತೇವೆ.
ಈ ಪರಿಹಾರ ನಿಧಿಗಳು ವಯನಾಡ್‍ಗೆ ಸಹಜ ಸ್ಥಿತಿಯನ್ನು ತರಲು ರಾಜ್ಯದ ಸಾಮೂಹಿಕ ಪ್ರಯತ್ನಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿವೆ.

ಇತ್ತೀಚಿನ ಸುದ್ದಿ

ಜಾಹೀರಾತು