ಇತ್ತೀಚಿನ ಸುದ್ದಿ
ಬಹುಸಂಸ್ಕೃತಿ ಉತ್ಸವದ ಚಿತ್ರಕಲಾ ಫಲಿತಾಂಶ ಪ್ರಕಟ: ವಿಟ್ಲ ಪ್ರೌಢಶಾಲೆಯ ಕೌಶಿಕ್ ಪ್ರಥಮ, ಉರ್ವಾ ಕೆನರಾ ಹೈಸ್ಕೂಲಿನ ಅನ್ವಿತ್ ದ್ವಿತೀಯ
14/11/2024, 20:59
ಮಂಗಳೂರು(reporterkarnataka.com): ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಮಂಗಳೂರಿನಲ್ಲಿ ನಡೆಯುವ ಬಹುಸಂಸ್ಕೃತಿ ಉತ್ಸವದ ಸಲುವಾಗಿ ತುಳು ಭವನದಲ್ಲಿ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
ವಿಟ್ಲ ವಿಠಲ ಪ್ರೌಢಶಾಲೆಯ ಕೌಶಿಕ್ ಪ್ರಥಮ ಬಹುಮಾನ ಪಡೆದಿದ್ದಾರೆ. ಮಂಗಳೂರು ಉರ್ವಾ ಕೆನರಾ ಹೈಸ್ಕೂಲಿನ ಅನ್ವಿತ್ ಹರೀಶ್ ದ್ವಿತೀಯ ಬಹುಮಾನ ಪಡೆದಿದ್ದಾರೆ. ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪೂಜಾ ತೃತೀಯ ಬಹುಮಾನ ಪಡೆದಿದ್ದಾರೆ.5 ಮಂದಿಗೆ ಸಮಾಧಾನಕರ ಬಹುಮಾನವನ್ನು ಘೋಷಿಸಲಾಗಿದೆ.
ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿಘ್ನೇಶ್ ವಿಶ್ವಕರ್ಮ, ವೇಣೂರು ಸರಕಾರಿ ಪ್ರೌಢ ಶಾಲೆಯ ಶರತ್ , ವೇಣೂರು ಸರಕಾರಿ ಪ್ರೌಢ ಶಾಲೆಯ ಸಾತ್ವಿಕ್ ಗಣೇಶ್ , ಮಂಗಳೂರು ಲೇಡಿಹಿಲ್ ವಿಕ್ಟೋರಿಯಾ ಶಾಲೆಯ ಸೋನಾಲಿ ಕೆ.ಎಸ್. , ದೇರಳಕಟ್ಟೆ ವಿದ್ಯಾರತ್ನ ಶಾಲೆಯ ಮೆಹೆಕ್ ಫಾತಿಮಾ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಹಿರಿಯ ಕಲಾವಿದ ಹಾಗೂ ನಿವೃತ್ತ ಚಿತ್ರಕಲಾ ಶಿಕ್ಷಕ ಗಣೇಶ್ ಸೋಮಾಯಾಜಿ, ಮಹಾಲಸಾ ಚಿತ್ರಕಲಾ ಶಾಲೆಯ ಶಿಕ್ಷಕ ಎನ್.ಎಸ್.ಪತ್ತಾರ್, ಯುವ ಕಲಾವಿದ ಹರೀಶ್ ಕೊಡಿಯಾಲ್ ಬೈಲ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ವಿಜೇತರಿಗೆ ಮಂಗಳೂರಿನಲ್ಲಿ ನಡೆಯುವ ಬಹುಸಂಸ್ಕೃತಿ ಉತ್ಸವದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.