ಇತ್ತೀಚಿನ ಸುದ್ದಿ
ಬದುಕಿನ ಯಾನ ಮುಗಿಸಿದ ಮಲಯಾಳಂ ನಟಿ ಶರಣ್ಯ: ಬ್ರೈನ್ ಟ್ಯೂಮರ್ ಗೆ 11 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕಲಾವಿದೆ !!
10/08/2021, 08:57
ತಿರುವನಂತಪುರ(reporterkarnataka.com) ಮಲಯಾಳಂ ಕಿರುತೆರೆಯಲ್ಲಿ ಬಲು ದೊಡ್ಡ ಹೆಸರು ಮಾಡಿದ್ದ ಮಲಯಾಳಂ ನಟಿ ಶರಣ್ಯ ಶಶಿ ಅವರು ಕ್ಯಾನ್ಸರ್ ಎಂಬ ಮಹಾ ಮಾರಿಗೆ ಬಲಿಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ.
35 ವರ್ಷ ವಯಸ್ಸಿನ ಮುದ್ದು ಮುಖದ ನಟಿ ಕಳೆದ 10 ವರ್ಷದಿಂದ ಬ್ರೈನ್ ಟ್ಯೂಮರ್ ವಿರುದ್ಧ ಹೋರಾಡುತ್ತಲೇ ಬಂದಿದ್ದರು. ಅವರಿಗೆ ಒಟ್ಟು 11 ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಕೊರೋನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ನಂತರ ಇದ್ದಕ್ಕಿದ್ದ ಹಾಗೆ ಅವರ ದೇಹದಲ್ಲಿ ಸೋಡಿಯಂ ಲೆವಲ್ ಏರುಪೇರಾಯಿತು.
ಮತ್ತೆ ಅವರನ್ನು ತಿರುವನಂತಪುರ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಬದುಕಿನ ಯಾನವನ್ನು ಮುಗಿಸಿದ್ದಾರೆ.
2012ರಲ್ಲಿ ನಟಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಇದೇ ಕಾರಣಕ್ಕೆ ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.