12:11 PM Wednesday23 - April 2025
ಬ್ರೇಕಿಂಗ್ ನ್ಯೂಸ್
Terror Attack | ಇಬ್ಬರು ಉಗ್ರರ ಹೆಡೆಮುರಿ ಕಟ್ಟಿದ ಸೇನೆ ; ಮುಂದುವರಿದ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳ ವಿರುದ್ಧ ಸೇನಾ ಕಾರ್ಯಾಚರಣೆ: ಇಬ್ಬರು… ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ…

ಇತ್ತೀಚಿನ ಸುದ್ದಿ

ಬಡವರಿಗೆ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳು ಸತಾಯಿಸುತ್ತಿವೆ; ಸೂಟು-ಬೂಟಿಗೆ ಕೈಬೀಸಿ ಕೊಡುತ್ತಿವೆ!!

07/03/2022, 22:24

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಶ್ರಮಿಕರಿಗೆ ಸಾಲ ಕೊಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಹತ್ತಾರು ದಾಖಲೆ ಕೇಳಿ ವರ್ಷಾನುಗಟ್ಟಲೇ ಸತಾಯಿಸುತ್ತವೆ. ಸೂಟು ಬೂಟು ಹಾಕಿಕೊಂಡು ಇಂಗ್ಲಿಷ್‌ನಲ್ಲಿ ಮಾತನಾಡಿದದರೆ ಅವನ ಕೈಕುಲಕಿ ನೂರಾರು ಸಾವಿರ ಕೋಟಿ ರೂ ನೀಡುತ್ತವೆ .10-20 ಸಾವಿರ ರೂ  ಸಾಲ ಪಡೆದವರ ಮನೆ ಹರಾಜು ಹಾಕುವ ದೇಶದ ಪರಿಸ್ಥಿತಿ ಬದಲಾಯಿಸ ಬೇಕಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು .

ಪಟ್ಟಣದ ರಾಜಧಾನಿ ಮಂಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಶ್ರೀನಿವಾಸಪುರ ಶಾಖೆ , ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ 102 ಮಹಿಳಾ ಸಂಘಗಳಿಗೆ 5.2 ಕೋಟಿ ರೂ ಸಾಲ ವಿತರಿಸಿ ಮಾತನಾಡಿ , ಸತತ 8 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತಿದೆ . 

ಹಿಂದೆ 35 ಸಾವಿರ ರೂ ಇದ್ದ ಸಾಲವನ್ನು ನಂತರ 50 ಸಾವಿರ ರೂ.ಗೆ ಏರಿಸಿ ಶೂನ್ಯ ಬಡ್ಡಿಯಲ್ಲಿ ಕೊಡಲಾಗುತ್ತದೆ. ಸಾಲ ಕೊಡುವಾಗ ನಿಮ್ಮನ್ನು ಬ್ಯಾಂಕ್ ಗೌರದಿಂದ ಕಾಣುತ್ತದೆ. ಹಾಗಾಗಿ ಪಡೆದ ಸಾಲ ಸಕಾಲಕ್ಕೆ ಪಾವತಿ ಮಾಡಿದಲ್ಲಿ ಇತರರಿಗೆ ಸಾಲ ಕೊಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಎಂ ಎಲ್‌ ಸಿ ಎಂ.ಎಲ್.ಅನಿಲ್ ಕುಮಾರ್ , ಕಸಬಾ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಆಲಂಬಗಿರಿ ಅಯ್ಯಪ್ಪ , ಉಪಾಧ್ಯಕ್ಷೆ ಶಾಂತಮ್ಮ ,ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿರ್ದೇಶಕರಾದ ಶಬೀರ್ ಅಹ್ಮದ್ ,ದ್ವಾರಸಂದ್ರ , ನಾರಾಯಣಸ್ವಾಮಿ , ಮುನಿ ವೆಂಕಟಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ವಿ. ವೆಂಕಟರೆಡ್ಡಿ , ಎಸ್.ವಿ.ಸುಧಾಕರ್‌ , ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಧ್ಯಕ್ಷ ದಿಂಬಾಲ್ – ಅಶೋಕ್ ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಚರ್  ಅಕ್ಬರ್ ಷರೀಫ್ ,  ಪುರಸಭೆ ಸದಸ್ಯರಾದ ಕೆ. ಅನೀಸ್ ಅಹಮದ್ , ಇಪ್ತಿಕಾರ್ ಅಹ್ಮದ್ , ಕೊಂಡಸಂದ್ರ ಶಿವಾರೆಡ್ಡಿ , ಲಕ್ಷ್ಮಣರೆಡ್ಡಿ ಇತರರು  ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು