ಇತ್ತೀಚಿನ ಸುದ್ದಿ
ಬಡ ಮಹಿಳೆ ಸರಕಾರದ ಯಾವುದೇ ಸೌಲಭ್ಯ ದೊರಕಿಲ್ಲ ಎಂದು ಅಪಪ್ರಚಾರ: ಸತ್ಯಾಸತ್ಯತೆ ತಿಳಿಯಲು ಕುವೆ ಗ್ರಾಪಂ ಮುಖ್ಯಸ್ಥರ ಭೇಟಿ
12/05/2022, 23:32
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ ತಲಗೂರು ಗ್ರಾಮದಲ್ಲಿ ಬಡ ಮಹಿಳೆಗೆ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರದಿಂದ ಯಾವುದೇ ಸರ್ಕಾರಿ ಸೌಲಭ್ಯ ಹಾಗೂ ನಿವೇಶನ ಒದಗಿಸಿ ಕೊಟ್ಟಿಲ್ಲವೆಂದು ಜಾಲತಾಣಗಳಲ್ಲಿ ಮರ್ಕಲ್ ಗ್ರಾಮದ ವ್ಯಕ್ತಿಯೊಬ್ಬರು ಅಪಪ್ರಚಾರ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿಯವರು ಸತ್ಯಾಸತ್ಯತೆಯನ್ನು ತಿಳಿಯಲು ಆ ಕುಟುಂಬದ ಮನೆಗೆ ಭೇಟಿ ನೀಡಿದಾಗ ಸತ್ಯಾಂಶ ಹೊರಬಂದಿದೆ.
ಗ್ರಾಮ ಪಂಚಾಯಿತಿಯಿಂದ ಈಗಾಗಲೇ ಅವರಿಗೆ ಮನೆ ಕಟ್ಟಲು ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಕೂಡ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮಾಡಿಕೊಟ್ಟಿದ್ದಾರೆ.
ಆದರೂ ಕೂಡ ಪ್ರಚಾರದ ಗೀಳಿಗಾಗಿ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗಿದೆ ಎನ್ನುವ ಆರೋಪ ಕೇಳಿ
ಬಂದಿದೆ.ಗ್ರಾಮ ಪಂಚಾಯಿತಿಯಿಂದ ಅನುದಾನ ಮನೆ ಕಟ್ಟಲು ಬಿಡುಗಡೆಯಾಗಿದ್ದು ಈಗಿರುವ ಮನೆಯ ಮುಂಭಾಗದಲ್ಲಿ ಫೌಂಡೇಶನ್ ಕೂಡ ಹಾಕಲಾಗಿದೆ. ಗ್ರಾಮ ಪಂಚಾಯಿತಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿ ಅಪಪ್ರಚಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕುವೆ ಗ್ರಾಮಪಂಚಾಯತಿ ವ್ಯಾಪ್ತಿಯ ಮುಖಂಡರು ಮಂಗಳವಾರ ಸಂಜೆ ರತ್ನಮ್ಮ ರವರ ಮನೆಗೆ ಭೇಟಿ ನೀಡಿ ಮನೆಯನ್ನು ಬೇಗ ಪೂರ್ಣಗೊಳಿಸಲು ತಿಳಿಸಲಾಯಿತು.