ಇತ್ತೀಚಿನ ಸುದ್ದಿ
ಬಾಬಾ ರಾಮ್ ದೇವ್ ವಿರುದ್ಧ ಐಎಂಎ ಮತ್ತೆ ಗರಂ: ದೇಶದ್ರೋಹ ಪ್ರಕರಣ ದಾಖಲಿಸಲು ಪ್ರಧಾನಿಗೆ ಒತ್ತಾಯ
27/05/2021, 07:43
ನವದೆಹಲಿ(reporterkarnataka news): ಕೊರೊನಾ ಲಸಿಕೆ ಹಾಗೂ ಅಲೋಪತಿ ವೈದ್ಯ ಪದ್ಧತಿ ಕುರಿತು ಟೀಕೆ ಮಾಡಿರುವ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಫುಲ್ ಗರಂ ಆಗಿದೆ. ಪತಂಜಲಿ ಮುಖ್ಯಸ್ಥರಾದ ರಾಮ್ ದೇವ್ ಅವರು ಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಐಎಂಎ ಪ್ರಧಾನಿ
ನರೇಂದ್ರ ಮೋದಿ ಅವರಿಗೆ ಐಎಂಎ ಪತ್ರ ಬರೆದಿದೆ.
ಅಲೋಪಥಿ ಔಷಧಗಳನ್ನು ಪಡೆಯುತ್ತಿರುವ ಲಕ್ಷಾಂತರ ಜನರು ಮೃತಪಡುತ್ತಿದ್ದಾರೆ. ಕೋವಿಡ್ ಲಸಿಕೆ ಪಡೆದ 10,000 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಬಾಬಾ ರಾಮ್ ದೇವ್ ಹೇಳಿಕೆ ನೀಡಿದ್ದರು. ಅಲೋಪಥಿ ವೈದ್ಯಕೀಯ ಪದ್ಧತಿ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಾಬಾ ರಾಮ್ ದೇವ್ ಕ್ಷಮೆಯಾಚಿಸಬೇಕು ಹಾಗೂ 1,000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಪಾವತಿಸಬೇಕು ಎಂದು ಐಎಂಎ ಉತ್ತರಾಖಂಡ ಘಟಕ ನೋಟಇಸ್ ನೀಡಿತ್ತು.
ಇದರ ಬೆನ್ನಲ್ಲೇ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಐಎಂಎ, ಕೋವಿಡ್ ಲಸಿಕೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಾಬಾ ರಾಮ್ ದೇವ್ ವಿರುದ್ಧ ಕೇಸ್ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.