ಇತ್ತೀಚಿನ ಸುದ್ದಿ
ಭಾರಿ ಮಳೆ; ಕುಲಶೇಖರ ರೈಲ್ವೆ ಸುರಂಗ ಸಮೀಪ ಭೂ ಕುಸಿತ; ರೈಲು ಸಂಚಾರ ವ್ಯತ್ಯಯ
16/07/2021, 14:01
ಮಂಗಳೂರು(reporterkarnataka news) : ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಕುಲಶೇಖರ ರೈಲ್ವೆ ಟನಲ್ ಬಳಿ ರೈಲು ಹಳಿಗಳ ಮೇಲೆ ಭಾರೀ ಭೂ ಕುಸಿತ ಉಂಟಾಗಿದ್ದು, ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಜುಲೈ19ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.