ಇತ್ತೀಚಿನ ಸುದ್ದಿ
ಭಾರೀ ಗಾಳಿಮಳೆ: ಮರ ಬಿದ್ದು ಪಾದಚಾರಿ ಮಹಿಳೆ ದಾರುಣ ಸಾವು; ಇತರ 3 ಮಂದಿಗೆ ತೀವ್ರ ಗಾಯ
12/05/2024, 19:58
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದ್ದು, ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದಲ್ಲಿ ಮರ ಬಿದ್ದು ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮುಂಗಾರು ಪೂರ್ವ ಮಳೆಗೆ ಮೂರನೇ ಬಲಿಯಾಗಿದೆ.
ಕೊಪ್ಪ ಮೂಲದ ಸವಿತಾ (48) ಎಂಬವರು ಮೃತಪಟ್ಟ ದುರ್ದೈವಿ. ಸವಿತಾ ಅವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಅವರ ಮೈ ಮೇಲೆ ಮರ ಬಿದ್ದಿದೆ. ಭಾರೀ ಗಾಳಿ-ಮಳೆಗೆ ಮಹಿಳೆ ಮತ್ತು ಕಾರಿನ ಮೇಲೆ ಏಕಕಾಲಕ್ಕೆ ಮರ ಬಿದ್ದಿದೆ.ಕಾರಿನ ಮೇಲೆ ಮರ ಬಿದ್ದು ಕಾರಿನಲ್ಲಿದ್ದ ಮೂವರಿಗೂ ತೀವ್ರ ಗಾಯಗೊಂಡಿದ್ದಾರೆ.
ಕಾರು ಸಂಪೂರ್ಣ ಜಖಂಗೊಂಡಿದೆ.
ಗಾಯಾಳುಗಳು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














