ಇತ್ತೀಚಿನ ಸುದ್ದಿ
ಅಯ್ಯಪ್ಪ ಮಾಲಾಧಾರಿಗಳ ಸಾವು: ಮಾನವೀಯತೆ ಮೆರೆದ ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್
19/01/2024, 18:13
*ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಮೂವರ ಮಾಲಧಾರಿಗಳ ಶವ ಪತ್ತೆ*
*ಕಪಿಲಾ ನದಿಯಲ್ಲಿ ಪ್ರಾಣ ಕಳೆದುಕೊಂಡ ಮೂವರು ಮಾಲಧಾರಿಗಳ ಕುಟುಂಬಕ್ಕೆ ಸ್ಥಳದಲ್ಲಿಯೇ ವೈಯಕ್ತಿಕ ಪರಿಹಾರ ನೀಡಿದ ಶಾಸಕ ದರ್ಶನ್ ಧ್ರುವನಾರಾಯಣ*
*ಮಾಲಾಧಾರಿಗಳ ಸ್ವಗ್ರಾಮಕ್ಕೆ ಶವ ತಲುಪಿಸಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ ಶಾಸಕ ದರ್ಶನ್ ಧ್ರುವನಾರಾಯಣ*
ಮೋಹನ್ ನಂಜನಗೂಡು ಮೈಸೂರು
info reporterkarnataka@gmail.com
ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿಯ ಹೆಜ್ಜೆಗೆ ಸೇತುವೆಯ ಬಳಿ ಸುಳಿಗೆ ಸಿಲುಕಿ ಮೂವರು ಮಾಲಾದಾರಿಗಳು ಸಾವನ್ನಪ್ಪಿರುವ ವಿಚಾರ ತಿಳಿದು ನಂಜನಗೂಡಿನ ಶಾಸಕ ದರ್ಶನ್ ಧ್ರುವ ನಾರಾಯಣ್ ತಾಲೂಕಿನಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯನ್ನು ಅರ್ಧಕ್ಕೆ ಮೋಟಕುಗೊಳಿಸಿ ಘಟನೆ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಮತ್ತು ಪೊಲೀಸರಿಗೆ ಸಾವನಪ್ಪಿರುವ ಮೂವರ ಮಾಲಾದಾರಿಗಳ ಶವವನ್ನು ಹೊರ ತೆಗೆಯಲು ಚುರುಕುಕರ ಚರಣೆ ನಡೆಸಬೇಕು ಆದಷ್ಟು ಬೇಗ ಮೃತ ಮಾಲಾಧಾರಿಗಳ ಶವವನ್ನು ಅವರ ಸ್ವಗ್ರಾಮಕ್ಕೆ ರವಾನಿಸಬೇಕು ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು.
ಕೂಡಲೇ ಶಾಸಕರ ಮಾತಿಗೆ ಎಚ್ಚೆತ ಅಗ್ನಿಶಾಮಕ ಮತ್ತು ಪೊಲೀಸ್ ಅಧಿಕಾರಿಗಳು ನದಿಯಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿ ಸಾವನಪ್ಪಿದ ಮೂವರು ಮಾಲದಾರಿಗಳ ಶವವನ್ನು ಹೊರ ತೆಗೆದು ಶಾಸಕ ದರ್ಶನ್ ಧ್ರುವ ನಾರಾಯಣ ಸ್ಥಳದಲ್ಲಿ ಕಣ್ಣೀರಿಟ್ಟು ಮೂವರಿಗೆ ವೈಯಕ್ತಿಕ ಪರಿಹಾರ ನೀಡಿ ಉಚಿತ ವಾಹನದ ವ್ಯವಸ್ಥೆಯನ್ನು ಕಲ್ಪಿಸಿ ಮೃತ ಮಾಲದಾರಿಗಳ ಸ್ವಗ್ರಾಮಕ್ಕೆ ಶವಗಳು ತೆರಳಲು ಅನುವು ಮಾಡಿಕೊಟ್ಟರು.
ಶಾಸಕ ದರ್ಶನ್ ಧ್ರುವ ನಾರಾಯಣ್ ರವರ ಮಾನವೀಯ ಕಳಕಳಿಯನ್ನು ಸ್ಥಳದಲ್ಲಿ ಗಮನಿಸಿದ ನಂಜನಗೂಡಿನ ಜನತೆ ಮತ್ತು ಭಕ್ತ ಸಮೂಹ ಕ್ಷಣ ಕಾಲ ಮೌನಕ್ಕೆ ಶರಣಾದರು.