ಇತ್ತೀಚಿನ ಸುದ್ದಿ
ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರತಿಷ್ಠಾಪನೆ: ನಂಜನಗೂಡಿನಾದ್ಯಂತ ಶ್ರೀರಾಮ ಪೂಜೆ, ಹೋಮ- ಹವನ
22/01/2024, 17:25
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮರ್ಯಾದೆ ಪುರುಷ ಶ್ರೀಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಇಂದು ನಂಜನಗೂಡಿನ ವಿವಿಧಡೆ ಶ್ರೀ ರಾಮನ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು
ಪಟ್ಟಣದ ಒಕ್ಕಲಗೇರಿ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಭಕ್ತರಿಂದ ಬೆಳಿಗ್ಗೆಯಿಂದಲೇ ಹೋಮ ಹವನ ಹಾಗೂ ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಬಣ್ಣ ಬಣ್ಣದ ಹೂವು ಹಾಗೂ ರಂಗೋಲಿಗಳಿಂದ ರಾಮ ಮಂದಿರವನ್ನು ಅಲಂಕರಿಸಲಾಗಿತ್ತು. ಸ್ಥಳ ಪುರೋಹಿತರಾದ l ಕೃಷ್ಣಾ ಜೋಯಿಸ್ ಅವರ ನೇತೃತ್ವದಲ್ಲಿ ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಜೈ ಶ್ರೀರಾಮ್ ಎಂಬ ಹರ್ಷೋದ್ಗಾರದೊಂದಿಗೆ ಶ್ರೀ ರಾಮನಾಮ ಜಪಿಸುತ್ತಾ ಜಯಕಾರದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ ಯುವಕರು ಹಾಗೂ ಭಕ್ತರು
ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮರ್ಯಾದ ಪುರುಷ ಶ್ರೀ ರಾಮನಿಗೆ ತಮ್ಮ ಭಕ್ತಿ ನಮನ ಸಲ್ಲಿಸಿದರು.
ಬಂದ ಎಲ್ಲಾ ಭಕ್ತರಿಗೆ ಶ್ರೀರಾಮ ಮಂದಿರದ ಸಮಿತಿ ವತಿಯಿಂದ ಅನ್ನದಾನ ಏರ್ಪಡಿಸಲಾಗಿತ್ತು.
ಪೂಜಾ ಕಾರ್ಯದಲ್ಲಿ ಬಿಜೆಪಿ ರಾಜ್ಯ ಮುಖಂಡರಾದ ಅಶೋಕ್, ಚಾಮರಾಜನಗರ ಲೋಕಸಭಾ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಎಸ್. ಮಹದೇವಯ್ಯ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ನಿಗಮದ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗೌಡ, ಮುಖಂಡರುಗಳಾದ ವಿನಯ್, ಬಸವಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಉದ್ಯಮಿ ಕೃಷ್ಣಪ್ಪ, ನಂಜುಂಡಸ್ವಾಮಿ, ಪರಮೇಶ್, ಮಂಜುನಾಥ್, ಶಿವಕುಮಾರ್, ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.