10:10 AM Sunday8 - February 2026
ಬ್ರೇಕಿಂಗ್ ನ್ಯೂಸ್
ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ* ಅನೈತಿಕ ಸಂಬಂಧ ಕೊಲೆಗೆ ಕಾರಣ?: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7… ಎಸಿ ಕೋರ್ಟ್ ಕೇಸ್: ಎರಡೂವರೆ ವರ್ಷದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದೇವೆ: ಸಚಿವ ಕೃಷ್ಣ ಬೈರೇಗೌಡರು…

ಇತ್ತೀಚಿನ ಸುದ್ದಿ

ಆ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹೋರಾಟಕ್ಕೆ ಶೋಷಿತ ಸಮುದಾಯಗಳ ತೀರ್ಮಾನ

03/08/2024, 16:22

ಗಣೇಶ ಇನಾಂದರ್ ಬಳ್ಳಾರಿ
info.reporterkarnataka@gmail.com

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇರದಿದ್ದರೂ ಮುಡಾ ನಿವೇಶನ ಹಂಚಿಕೆಯನ್ನು ವಿವಾದ ಮಾಡಿ, ಸಿದ್ದರಾಮಯ್ಯ ಅವರ ಹೆಸರಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದ್ದು, ಸಿದ್ದರಾಮಯ್ಯ ಅವರಿಗೆ ನೈತಿಕವಾಗಿ ಬೆಂಬಲಿಸಲು ಇದೇ ಆಗಸ್ಟ್ 5ರಂದು ಬಳ್ಳಾರಿ ನಗರದ ಗಾಂಧಿ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಡಿಎಸ್ಎಸ್ ರಾಜ್ಯ ಸಂಚಾಲಕ ಎ. ಮಾನಯ್ಯ ಅವರು ತಿಳಿಸಿದ್ದಾರೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ವತಿಯಿಂದ ಶನಿವಾರ ಖಾಸಗಿ ಹೊಟೇಲಿನಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ವಿವಾದವೇ ಅಲ್ಲದ ವಿಷಯವನ್ನು ವಿವಾದವಾಗಿಸಿ, ರಾಜ್ಯಪಾಲರ ದುರುಪಯೋಗ ಮಾಡಿಕೊಂಡು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನ ನಡೆಸಿದೆ, ರಾಜ್ಯಪಾಲರು ಕೂಡ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಬಡವರ ಪರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಬಿಜೆಪಿಗೆ ಸಹಿಸಲಾಗುತ್ತಿಲ್ಲ ಎಂದರು.
ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾ.ಗಾದಿ ಲಿಂಗನಗೌಡ ಅವರು ಮಾತನಾಡಿ, ಪಕ್ಷಪಾತಿ ಮಾಧ್ಯಮ ಬಿಜೆಪಿಯ ಸುಳ್ಳುಗಳನ್ನು ಬಯಲು ಮಾಡಲ್ಲ, ದುಷ್ಟ ಶಕ್ತಿಗಳ ಕೈಯಲ್ಲಿ ಮಾಧ್ಯಮ ಸಿಕ್ಕಿಕೊಂಡಿದೆ. ಬಿಜೆಪಿಯಿಂದ ಗೋಬೆಲ್ಸ್ ನೀತಿ ಅನುಸರಿಸಲಾಗುತ್ತಿದೆ. ರಾಜ್ಯ ಹಾಗೂ ದೇಶದಲ್ಲಿ ಅತಿ ದೊಡ್ಡ ಸಂಖ್ಯೆಯ ಜನರು ಅಹಿಂದ ಜನ, ಆದರೆ ನಮ್ನಲ್ಲಿ ಒಗ್ಗಟ್ಟಿನ ಸಮಸ್ಯೆ ಇದೆ ಎಂದರು.
ಸಿದ್ದರಾಮಯ್ಯರಂತಹ ನಾಯಕರನ್ನು ನಾವು ಕಳೆದುಕೊಂಡರೆ ನಮ್ಮ ಸಮುದಾಯಗಳ ಅವನತಿ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ, ಸಿಎಂ ಸಿದ್ದರಾಮಯ್ಯ ಪರ ನಾವಿದ್ದೇವೆ ಎಂದರು.
ಹುಮಾಯೂನ್ ಖಾನ್, ಚಿದಾನಂದಪ್ಪ ಯಾದವ್, ಮುಂಡ್ರಿಗಿ ನಾಗರಾಜ್, ನರಸಪ್ಪ, ಶಿವಶಂಕರ್, ವೆಂಕಟೇಶ್ ಹೆಗಡೆ, ರಫೀಕ್, ಬೆಣಕಲ್ ಬಸವರಾಜಗೌಡ, ಪಿ.ಜಗನ್ನಾಥ, ಗಾದೆಪ್ಪ, ಕುಡಿತಿನಿ ರಾಮಾಂಜನೇಯ, ಯರ್ರಿಸ್ವಾಮಿ, ಸಂಗನಕಲ್ಲು ವಿಜಯಕುಮಾರ್, ಧನಂಜಯ ಹಮಲ್, ಇಮಾಮ್ ಗೋಡೆಕಾರ ಮೊದಲಾದವರು ಹಾಜರಿದ್ದರು.
*ಶೋಷಿತ ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕ ಅಸ್ತಿತ್ವಕ್ಕೆ*
ಇದೇ ವೇಳೆ ಶೋಷಿತ ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಡಾ.ಗಾದಿ ಲಿಂಗನಗೌಡ, ಗೌರವಾಧ್ಯಕ್ಷರಾಗಿ ಹುಮಾಯೂನ್ ಖಾನ್, ಮಾನಯ್ಯ, ಮುಂಡ್ರಿಗಿ ನಾಗರಾಜ್, ಚಿದಾನಂದಪ್ಪ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಾಧ್ಯಕ್ಷರಾಗಿ ರೈತ ಮುಖಂಡ ಶಿವಶಂಕರ್, ಉಪಾಧ್ಯಕ್ಷರಾಗಿ ಯರ್ರಿಸ್ವಾಮಿ, ಪಿ.ಜಗನ್ನಾಥ್, ಅಯಾಜ್ ಅಹ್ಮದ್, ಪಿ.ಗಾದೆಪ್ಪ, ಚಂದ್ರಶೇಖರ ಆಚಾರ್, ಕೆರಗೋಡಪ್ಪ, ರಾಮು ನಾಯ್ಕ್, ಎಂ.ಎಸ್.ಮಂಜುಳಾ, ಯು.ಬಸವರಾಜ, ಸರಗೂ ನಾಗರಾಜ, ದುರುಗಪ್ಪ ತಳವಾರ, ಬಿ.ಎಂ.ರಫೀಕ್, ವಿ.ರಾಮಾಂಜನೇಯ, ವೆಂಕಟೇಶ ಹೆಗಡೆ, ಧನಂಜಯ ಹಮಲ್ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಇಮಾಮ್ ಗೋಡೆಕಾರ, ಸಂಘಟನಾ ಕಾರ್ಯದರ್ಶಿಯಾಗಿ ಸಂಗನಕಲ್ಲು ವಿಜಯಕುಮಾರ್,
ಸಹ ಕಾರ್ಯದರ್ಶಿಗಳಾಗಿ ಚಂಪಾ ಚವ್ಹಾಣ್, ಸಾಗರ್, ಶ್ರೀನಿವಾಸ, ಮಾರೆಪ್ಪ, ಜೆ.ಕೆ.ವಿಜಯಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕರಾಗಿ ಅಫಾಕ್ ಹುಸೇನ್, ನರೇಂದ್ರ ಅವರನ್ನು ಆಯ್ಕೆ ಮಾಡಲಾಯಿತು.
ಪೂರ್ವಭಾವಿ ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಅವರ 77ನೇ ಜನ್ಮ ದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು