1:48 AM Tuesday18 - November 2025
ಬ್ರೇಕಿಂಗ್ ನ್ಯೂಸ್
Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ಅ.3ರಿಂದ ಕೊಟ್ಟಿಗೆಹಾರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಆರಂಭ

01/10/2024, 21:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.ಕಂ

ಕೊಟ್ಟಿಗೆಹಾರದ ಸೀತಾರಾಮ ದೇವಸ್ಥಾನದಲ್ಲಿ ಅ.3ರಿಂದ 12 ರವರೆಗೆ 62ನೇ ಶರನ್ನವರಾತ್ರಿ ಉತ್ಸವ ಆರಂಭವಾಗಲಿದ್ದು, ಸಿದ್ದತೆ ನಡೆಯುತ್ತಿದೆ.

ದೇವಸ್ಥಾನ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪಟ್ಟಣವೂ ವಿದ್ಯುತ್ ಅಲಂಕಾರದಿಂದ ಶೋಭಿಸುತ್ತಿದೆ. ಅ 3ರಂದು ಗುರುವಾರ ಸಂಜೆ 6ರಿಂದ 9 ಗಂಟೆವರೆಗೆ ಸಮಿತಿಯವರಿಂದ ಭಜನಾ ಕಾರ್ಯಕ್ರಮ, ನಂತರ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. 4ರಂದು ಶುಕ್ರವಾರ ಸಂಜೆ ತರುವೆ ಶ್ರೀ ಶಕ್ತಿಗಣಪತಿ ಭಜನಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ, 5ರಂದು ಶನಿವಾರ ರಾಮನಗರ ಶ್ರೀಮಾರುತಿ ಭಜನಾ ಮಂಡಳಿ ಭಜನಾ ಕಾರ್ಯಕ್ರಮ, 6ರಂದು ಭಾನುವಾರ ಸಂಜೆ ಅಜಾದ್ ನಗರ ಶಬರಿಗಿರಿ ಭಜನಾ ಮಂಡಳಿ ವತಿಯಿಂದ ಭಜನೆ, 7ರಂದು ಸೋಮವಾರ ಬಣಕಲ್ ಶ್ರೀ ಮಹಮ್ಮಾಯಿ ಭಜನಾ ಮಂಡಳಿ ವತಿಯಿಂದ ಭಜನೆ,8ರಂದು ಮಂಗಳವಾರ ದೇವನಗೂಲು ವನದುರ್ಗ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ಕುಮಾರಿ ಆರ್ವಿ ಚೇತನ್ ಅವರಿಂದ ಭರತನಾಟ್ಯ ಕಾರ್ಯಕ್ರಮ, ನಂತರ ಧಾರ್ಮಿಕ ಕಾರ್ಯಕ್ರಮ,9ರಂದು ಬುಧವಾರ ನಿಡುವಾಳೆಯ ಶ್ರೀರಾಮೇಶ್ವರ ಭಜನಾ ಮಂಡಳಿ ವತಿಯಿಂದ ಭಜನೆ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗ, 10 ರಂದು ಗುರುವಾರ ಸಮಿತಿಯವರಿಂದ ಭಜನೆ, 11ರಂದು ಶುಕ್ರವಾರ ಭಜನೆ,ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ, 12 ರಂದು ಶನಿವಾರ ಸಂಜೆ 6ರಿಂದ 10 ಗಂಟೆವರೆಗೆ ಭಜನೆ ಪ್ರಾರಂಭವಾಗಿ ನಗರ ಭಜನೆಯೊಂದಿಗೆ ಅತ್ತಿಗೆರೆ ಗ್ರಾಮದ ಸೋಮೇಶ್ವರ ದೇವಸ್ಥಾನದ ದರ್ಶನ ಪಡೆದು ಬಳಿಕ ಕೊಟ್ಟಿಗೆಹಾರದ ರಾಜಬೀದಿಯಲ್ಲಿ ಕೆಲ್ಲೂರು ಕೊಲ್ಲಿ ಶ್ರೀ ಭಜನಾ ಮಂಡಳಿ ಇವರಿಂದ ಭಜನಾ ಕುಣಿತ, ನಿಸಾನಿ ಮೇಳದೊಂದಿಗೆ ಸೀತಾರಾಮ ದೇವಸ್ಥಾನಕ್ಕೆ ತೆರಳಿ ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದ ಬಳಿಕ ಲಘು ಉಪಹಾರದೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು