ಇತ್ತೀಚಿನ ಸುದ್ದಿ
ಅತ್ತಿಕುಡಿಗೆ ಪ್ರಾಥಮಿಕ ಕೃಷಿ ಷತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಚುನಾವಣೆ ಇಂದು
05/01/2025, 10:18
ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು
info.reporterkarnataka@gmail.com
ಜಿಲ್ಲೆಯ ಕೊಪ್ಪ ತಾಲೂಕಿನ ಅತ್ತಿಕುಡಿಗೆ ಪ್ರಾಥಮಿಕ ಕೃಷಿ ಷತ್ತಿನ ಸಹಕಾರ ಸಂಘದ ಚುನಾವಣೆ ಇಂದು (ಜ.5) ನಡೆಯಲಿದೆ.
ಸಾಲ ಪಡೆದ ಕ್ಷೇತ್ರದಿಂದ ಹನ್ನೊಂದು ಹಾಗೂ ಸಾಲ ಪಡೆಯದ ಕ್ಷೇತ್ರದಿಂದ ಒಂದು ಒಟ್ಟು ಹನ್ನೆರಡು ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ.
ಸಾಮಾನ್ಯ ಕ್ಷೇತ್ರ- 5
ಹಿಂದುಳಿದ ವರ್ಗ ಎ-1
ಹಿಂದುಳಿದ ವರ್ಗ ಬಿ-1
ಪರಿಶಿಷ್ಟ ಜಾತಿ-1
ಪರಿಶಿಷ್ಟ ಪಂಗಡ-1
ಸಾಮಾನ್ಯ ಮಹಿಳಾ ಕ್ಷೇತ್ರ-2
ಸಾಲ ಪಡೆಯದ ಕ್ಷೇತ್ರ-1
ಒಟ್ಟು12 ಕ್ಷೇತ್ರಗಳಿದ್ದು 25 ಜನ ಕಣದಲ್ಲಿದ್ದಾರೆ. ಒಟ್ಟಾರೆ ಮತದಾರರ ಸಂಖ್ಯೆ 763.
ಇದರಲ್ಲಿ 528 ಮತದಾರರು ಸಾಲ ಪಡೆದ ಕ್ಷೇತ್ರದಲ್ಲಿದ್ದರೆ, 235 ಮತದಾರರು ಸಾಲ ಪಡೆಯದ ಕ್ಷೇತ್ರಕ್ಕೆ ಮತದಾನ ಮಾಡಬೇಕಿದೆ.