ಇತ್ತೀಚಿನ ಸುದ್ದಿ
ಕೊಡ್ಲಿಪೇಟೆಯಲ್ಲಿ ಉದ್ಯಮಿ ಮೇಲೆ ಲಾರಿ ಹರಿಸಿ ಕೊಲೆ ಯತ್ನ: ವಾಹನ ಬಿಟ್ಟು ಚಾಲಕ ಪರಾರಿ
23/10/2025, 15:55

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkatnstaka@gmail.com
ಸೋಮವಾರಪೇಟೆ ತಾಲೂಕಿನ ಉದ್ಯಮಿಯೊಬ್ಬರ ಕೊಲೆ ಯತ್ನ ನಡೆದಿದೆ. ಇಲ್ಲಿನ ಹ್ಯಾಂಡ್ ಪೋಸ್ಟ್ ಬಳಿಯ ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಕೊಡ್ಲಿಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜೆ. ಕೆ. ತೇಜ ಕುಮಾರ್ ಅವರು ಕಾರಿನಲ್ಲಿ ಪೆಟ್ರೋಲ್ ಬಂಕ್ ನಿಂದ ಮನೆಗೆ ತೆರಳುವ ಸಂದರ್ಭ ಏಕಾ ಎಕಿ ಲಾರಿ ಗುದ್ದಿದ್ದು, ಕಾರು ಬಹುತೇಕ ಜಖಂ ಗೊಂಡಿದೆ.
ಲಾರಿ ಕೊಡ್ಲಿಪೇಟೆಯ ಕೆರಗ ನಹಳ್ಳಿ ಗ್ರಾಮದ ಕೆ. ಆರ್ ರಮೇಶ್ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ವೈಯುಕ್ತಿಕ ಕಾರಣದಿಂದ ಈ ಕೊಲೆ ಯತ್ನ ನಡೆದಿದೆ ಎಂದು ತೇಜಕುಮಾರ್ ಶನಿವಾರಸಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರಿನ ಏರ್ ಬ್ಯಾಗ್ ತೆರದ ಕಾರಣ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ