6:44 PM Tuesday10 - February 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ

ಇತ್ತೀಚಿನ ಸುದ್ದಿ

ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ

18/10/2025, 20:12

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ವಿರಾಜಪೇಟೆಯ ಕಾರ್ಮಿಕ ಇಲಾಖೆಯಲ್ಲಿ ತಾನು ಸೀನಿಯರ್ ಲೇಬರ್ ಇನ್ಸ್ಪೆಕ್ಟರ್ ಎಂದು ಶಿವರಾಜು ಎನ್ನುವ ವ್ಯಕ್ತಿ ಮೊಬೈಲ್ ಸಂಖ್ಯೆ 8150816922 ಇಂದ ಗೋಣಿಕೊಪ್ಪದ ಉದ್ಯಮಿ ಚಂದನ್ ಕಾಮತ್ ರವರಿಗೆ ಕರೆ ಮಾಡಿ, ತಮ್ಮ ಸಂಸ್ಥೆಯ ಕಾರ್ಮಿಕ ಲೈಸನ್ಸ್ ನ ಬಾಬ್ತು ₹11350/- ಈ ಕೂಡಲೇ ಫೋನ್ ಪೇ ಮುಖಾಂತರ ಕಳುಹಿಸಿಕೊಡಬೇಕೆಂದು ಕೇಳಿರುತ್ತಾರೆ.
ಚಂದನ್ ರವರು ಫೋನ್ ಪೇ ಮಾಡಲಾಗುವುದಿಲ್ಲ, ತಾನು ವಿರಾಜಪೇಟೆ ಕಚೇರಿಗೆ ಬಂದು ಬಾಬ್ತನ್ನು ಕಟ್ಟುತೆನೆಂದು ಹೇಳಿ ವಿರಾಜಪೇಟೆಗೆ ತೆರಳುತ್ತಾರೆ.
ಕಾವೇರಿ ಸಂಕ್ರಮಣದ ಪ್ರಯುಕ್ತ ವಿರಾಜಪೇಟೆ ಕಾರ್ಮಿಕ ಕಚೇರಿ ರಜೆಯಿದ್ದು, ಶಿವರಾಜು ಎಂಬ ವ್ಯಕ್ತಿಯನ್ನು ಕರೆ ಮಾಡಿದರೆ ಆತ ಸಂಪರ್ಕಕ್ಕೆ ಸಿಗಲಿಲ್ಲ.
ನಂತರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸ್ನೇಹಿತರಾದ ವಿರಾಜಪೇಟೆ ಗಾಯತ್ರಿ ಭವನ ಹೋಟೆಲಿನ ಮಾಲೀಕರಾದ ಮುರಳಿ ಶೆಣೈ ಹಾಗೂ ಶಬರೀಶ್ ರವರು ಕಾರ್ಮಿಕ ಇಲಾಖೆಯ ಅಧಿಕಾರಿಯಾದ ನವೀನ್ ರವರನ್ನು ವಿಚಾರಿಸಿದ ವೇಳೆ ಶಿವರಾಜು ಅನ್ನುವಂತಹ ಯಾವುದೇ ವ್ಯಕ್ತಿ ಇಲಾಖೆಯಲ್ಲಿ ಹುದ್ದೆಯಲ್ಲಿ ಇಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಸಾರ್ವಜನಿಕರಿಗೆ ಇದೇ ರೀತಿ ಈ ವಂಚಕ ಇನ್ನಷ್ಟು ವಂಚನೆ ಮಾಡಬಹುದು ಎಂಬ ಉದ್ದೇಶದಿಂದ ಚಂದನ್ ಕಾಮತ್
ಮಡಿಕೇರಿಯ ಸೈಬರ್ ಪೊಲೀಸ್ ಸ್ಟೇಷನ್ ನಲ್ಲಿ ಈ ನಕಲಿ ವ್ಯಕ್ತಿಯ ಮೇಲೆ ಪುಕಾರು ನೀಡಿದ್ದಾರೆ.
ಸಾರ್ವಜನಿಕರು ಇಂತಹ ನಕಲಿ ಅಧಿಕಾರಿ ವಸೂಲಿ ಮಾಡಲು ಪ್ರಯತ್ನಿಸುವ ದುಷ್ಕರ್ಮಿಗಳ ಬಗ್ಗೆ ಎಚ್ಚರ ವಹಿಸಬೇಕು, ಸಂಶಯ ಕಂಡು ಬಂದಲ್ಲಿ ದೂರು ನೀಡುವಂತೆ ಕಾರ್ಮಿಕ ಇಲಾಖೆಯವರು ಹಾಗೂ ಸೈಬರ್ ಪೊಲೀಸ್ ಇಲಾಖೆಯವರು ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು