10:20 AM Monday13 - January 2025
ಬ್ರೇಕಿಂಗ್ ನ್ಯೂಸ್
ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಎಲ್ಲಿ?: ರಾಜ್ಯ ಸರ್ಕಾರದ ವಿರುದ್ಧ… ರಾಷ್ಟ್ರೀಯ ಜಲಮಾರ್ಗಗಳ ಪ್ರಮುಖ ಮೂಲಸೌಕರ್ಯ ನವೀಕರಣಕ್ಕೆ 5 ವರ್ಷಗಳಲ್ಲಿ 50,000 ಕೋಟಿ ಹೂಡಿಕೆ… ರಾಜ್ಯವನ್ನು “ಕೌಶಲ್ಯ ಅಭಿವೃದ್ಧಿ ಹಬ್‌” ಮಾಡುವುದೇ ನಮ್ಮ ಸರ್ಕಾರದ ಗುರಿ!;ಜಿಟಿಟಿಸಿ ಕೈಗಾರಿಕೆ-ಶೈಕ್ಷಣಿಕ ಸಮಾವೇಶದಲ್ಲಿ… ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ… ಶೃಂಗೇರಿ ದೇಗುಲಕ್ಕೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಸುವರ್ಣ ಮಹೋತ್ಸವದಲ್ಲಿ ಭಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ

ಇತ್ತೀಚಿನ ಸುದ್ದಿ

ಅತಿ ಹೆಚ್ಚು ಟ್ರಾಫಿಕ್: ವಿಶ್ವದಲ್ಲೇ ಬೆಂಗಳೂರಿಗೆ 3ನೇ ಸ್ಥಾನ; 10 ಕಿಮೀ ಸಾಗಲು 30 ನಿಮಿಷ 10 ಸೆಕೆಂಡ್!

13/01/2025, 10:20

ಬೆಂಗಳೂರು(reporterkarnataka.com): ಬೆಂಗಳೂರು ಮತ್ತೆ ವಿಶ್ವಮಟ್ಟದಲ್ಲಿ ಸುದ್ದಿಯಲ್ಲಿದೆ. ಸಿಲಿಕಾನ್ ಸಿಟಿ ಪ್ರಪಂಚದ ಅತಿ ಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ 3ನೇ ಸ್ಥಾನದಲ್ಲಿದೆ. ಖಾಸಗಿ ವಾಹನಗಳ ಸಂಖ್ಯೆ ವಿಪರೀತ ಏರಿಕೆಯಾಗುತ್ತಿರುವುದೇ ಇಲ್ಲಿನ ಟ್ರಾಫಿಕ್ ಗೋಳಿಗೆ ಮೂಲ ಕಾರಣವಾಗಿದೆ.
2024ರ ಟಾಂ ಟಾಂ ಟ್ರಾಫಿಕ್ ಇಂಡೆಕ್ಸ್ ರಿಪೋರ್ಟ್ ಪ್ರಕಾರ ವಿಶ್ವದ ಸ್ಲೋಯೆಸ್ಟ್ ಸಿಟಿಗಳಲ್ಲಿ ಬೆಂಗಳೂರು 3ನೇ ಸ್ಥಾನ ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ಟಾಪ್ 5 ಸ್ಥಾನಗಳಲ್ಲಿ ಭಾರತದ 4 ನಗರಗಳೇ ಇವೆ. ಇದರೊಂದಿಗೆ ಬೆಂಗಳೂರಿನ ಟ್ರಾಫಿಕ್ ಹಾವಳಿ ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ.
ಲೋಕೇಶನ್ ಟೆಕ್ನಾಲಜಿ ಸಂಸ್ಥೆ ಟಾಂ ಟಾಂ ಡಚ್ ಮೂಲದ ಸಂಸ್ಥೆಯಾಗಿದೆ. ವಿಶ್ವದ ಪ್ರಮುಖ ನಗರಗಳ ಟ್ರಾಫಿಕ್ ಸ್ಥಿತಿಗತಿಗಳ ಬಗ್ಗೆ ಇದು ಪ್ರತಿ ವರ್ಷ ಅಧ್ಯಯನ ನಡೆಸಿ ಪಟ್ಟಿ ಸಿದ್ಧಪಡಿಸುತ್ತದೆ. 2024ರ ವರದಿಯಲ್ಲಿ ಕೊಲಂಬಿಯಾದ ಬರಾಂಕ್ವಿಲ್ಲಾ ನಗರ ಮೊದಲ ಸ್ಥಾನ ಪಡೆದುಕೊಂಡಿದೆ. 2ನೇ ಸ್ಥಾನವನ್ನು ಕೋಲ್ಕತ್ತಾ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ದಿನೇ ದಿನೇ ತೀವ್ರವಾಗಿ ಏರಿಕೆಯಾಗುತ್ತಿರುವುದು ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ದೇಶದ ರಾಜಧಾನಿ ದೆಹಲಿಗೆ ಹೋಲಿಸಿದರೆ, ಕೆಲವು ವರ್ಷಗಳ ಹಿಂದೆ ಇದ್ದ ಖಾಸಗಿ ವಾಹನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ. ಸದ್ಯ ಬೆಂಗಳೂರಿನಲ್ಲಿ ಸುಮಾರು 2.5 ಮಿಲಿಯನ್ ಖಾಸಗಿ ವಾಹನಗಳಿವೆ. ದಿನಕ್ಕೆ 2 ಸಾವಿರ ಹೊಸ ವಾಹನಗಳು ಸೇರ್ಪಡೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದೇ ನಗರದಲ್ಲಿ ಟ್ರಾಫಿಕ್ ಒತ್ತಡಕ್ಕೆ ಮೂಲವಾಗಿದೆ.
ಬೆಂಗಳೂರಿನಲ್ಲಿ 10 ಕಿಮೀ ದೂರ ಪ್ರಯಾಣ ಮಾಡಲು ಸರಾಸರಿ 30 ನಿಮಿಷ 10 ಸೆಕೆಂಡ್ ಬೇಕಂತೆ. ಇದು 2023ಕ್ಕೆ ಹೋಲಿಕೆ ಮಾಡಿದರೆ 50 ಸೆಕೆಂಡ್ ಹೆಚ್ಚಾಗಿದೆ. ಉಳಿದಂತೆ ನಂಬರ್ ಒನ್ ಸ್ಥಾನ ಪಡೆದುಕೊಂಡಿರುವ ಬರಾಂಕ್ವಿಲ್ಲಾದಲ್ಲಿ 10 ಕಿಮೀ ಪ್ರಯಾಣ ಮಾಡಲು ಸರಾಸರಿ 36 ನಿಮಿಷ 6 ಸೆಕೆಂಡ್ ಬೇಕಂತೆ. ಕೋಲ್ಕತ್ತಾದಲ್ಲಿ ಈ ಸಮಯ ಸರಾಸರಿ 34 ನಿಮಿಷ 33 ಸೆಕೆಂಡ್ ಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು