ಇತ್ತೀಚಿನ ಸುದ್ದಿ
ಅಥಣಿ ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಮಹೇಶ್ ಕುಮಟಳ್ಳಿ
13/02/2023, 20:54
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳನ್ನು ಮೊದಲನೆಯದಾಗಿ ದೇವರಡ್ಡೆರಟ್ಟಿ ಗ್ರಾಮದಲ್ಲಿ ಸುಮಾರು ಒಂದು ಕೋಟಿ 37 ಲಕ್ಷ ರೂಗಳ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಭೂಮಿ ಪೂಜೆ ನೆರೇರಿಸಲಾಯಿತು.
1 ಕೋಟಿ 37 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ, 28 ಲಕ್ಷ ರೂ ವೆಚ್ಚದ ಸ ಕ ಹಿ ಪ್ರಾ ಶಾಲೆಯ 2 ಕೊಠಡಿಗಳ ಕಾಮಗಾರಿ ಭೂಮಿ ಪೂಜೆ, 20 ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ, 4 ಕೋಟಿ ರೂ ವೆಚ್ಚದ ಅಥಣಿಯಿಂದ ಮಸರಗುಪ್ಪಿ 4.5 ಕೀ ಮೀ ರಸ್ತೆ, ಕಾಮಗಾರಿ ಭೂಮಿ ಪೂಜೆ, 1 ಕೋಟಿ ರೂ ವೆಚ್ಚದ ಮಸರಗುಪ್ಪಿ – ತೇವರಟ್ಟವರೆಗೆ
2.5 ಕೀಮೀ ರಸ್ತೆ ಕಾಮಗಾರಿ ಭೂಮಿ ಪೂಜೆ,
14 ಲಕ್ಷ ವೆಚ್ಚದ ಸ ಕ ಹಿ ಪ್ರಾ ಶಾಲೆಯ 1 ಕೊಠಡಿ ಕಾಮಗಾರಿ ಭೂಮಿ ಪೂಜೆ, ಸಿನ್ನಾಳ ಗ್ರಾಮದಲ್ಲಿ1 ಕೋಟಿ ರೂ ವೆಚ್ಚದ ಜಲ ಜೀವನ್ ಮಿಶನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ ನೆವೇರಿಸಲಾಯಿತು.
ನಂತರ ಮಾತನಾಡಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಭಾಗದ ವಿವಿಧ ರಸ್ತೆಗಳು, ಶಾಲೆಗಳು, ಕುಡಿಯುವ ನೀರಿನ ಘಟಕಗಳು, ಸಮುದಾಯ ಭವನಗಳ ಅಭಿವೃದ್ಧಿಯು ಬಹು ಮುಖ್ಯ ಪಾತ್ರ ವಹಿಸಿವೆ. ಹಾಗಾಗಿ ಗ್ರಾಮೀಣ ಪ್ರದೇಶಕ್ಕೆ ನೀಡಲಾಗಿದೆ. ಬೇಸಿಗೆ ದಿನ ಸಮೀತಿಸುತ್ತಿರುವುರಿದ ಜಾನುವಾರುಗಳಿಗೆ ಮತ್ತು ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಾರದೆಂದು ಕರಿ ವಸೂತಿ ನೀರಾವರಿಯನ್ನು ಪ್ರಾರಂಭಿಸಲಾಗಿದೆ. ಇದರಿಂದ ಪೂರ್ವಭಾಗದ ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು ಈಗಾಗಲೇ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು ಮುಂದೆಯೂ ಸಹ ಅಥಣಿ ತಾಲೂಕಿನ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದರು.