ಇತ್ತೀಚಿನ ಸುದ್ದಿ
ಅಥಣಿ ಪಟ್ಟಣದ ವಾರ್ಡ್ ಗಳಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಿದಾನಂದ ಸವದಿ ಚಾಲನೆ
02/03/2024, 13:51
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ಮಾಜಿ ಉಪ ಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸಂ. ಸವದಿ ಅವರ ಪ್ರಯತ್ನದಿಂದ ಪುರಸಭೆ ವತಿಯಿಂದ ಕೈಗೊಳ್ಳುತ್ತಿರುವ
ಪಟ್ಟಣದ ವಾರ್ಡ್ 8 ಹಾಗೂ 7 ರಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಕಾಂಗ್ರೆಸ್ ಪಕ್ಷದ ಯುವ ನಾಯಕ ಚಿದಾನಂದ ಲ. ಸವದಿ ಅವರು ಇಂದು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ,ವಾರ್ಡ 8ರ ಸದಸ್ಯೆ ಶಾಂತಾ ದಿಲೀಪ ಲೋಣಾರೆ, ಚಿಕ್ಕೋಡಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಆಸೀಫ್ ತಾಂಬೋಳಿ, ಪ್ರಕಾಶ ಹೆಗ್ಗಣ್ಣವರ ಸೇರಿದಂತೆ ಮತ್ತಿತರ ಮುಖಂಡರು, ವಾರ್ಡ್ ನಿವಾಸಿಗಳು ಉಪಸ್ಥಿತರಿದ್ದರು.