ಇತ್ತೀಚಿನ ಸುದ್ದಿ
ಅಥಣಿ ಪಟ್ಟಣದ ಮೂಲಭೂತ ಸಮಸ್ಯೆ: ಪುರಸಭೆ ಸದಸ್ಯರ ನಿಯೋಗ ಮುಖ್ಯಾಧಿಕಾರಿ ಭೇಟಿ; ಪ್ರತಿಭಟನೆ ಎಚ್ಚರಿಕೆ
07/12/2022, 19:47
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ಪುರಸಭೆ ಸದಸ್ಯರ ನಿಯೋಗವು ಇಂದು ಅಥಣಿ ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ ಅವರನ್ನ ಭೇಟಿ ಮಾಡಿ ಅಥಣಿ ಪಟ್ಟಣದ ಸಮಸ್ಯೆಗಳ ಕುರಿತು ಚರ್ಚಿಸಿ, ನಿವಾರಣೆಯಾಗದಿದ್ದರೆ ಪ್ರತಿಭಟಣೆ ಮಾಡುವ ಎಚ್ಚರಿಕೆ ನೀಡಿದರು.
ಅಥಣಿ ಪಟ್ಟಣದ ಜೋಡು ಕೆರೆಗಳ ಅಭಿವೃದ್ಧಿ, ಪಟ್ಟಣದ ಟ್ರಾಫಿಕ್ ಸಮಸ್ಯೆ ಸೇರಿದಂತೆ ಹಲವು ವಾರ್ಡಗಳಲ್ಲಿನ ಮೂಲಭೂತ ಸೌಕರ್ಯದ ಬಗ್ಗೆ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಪರಿಹರಿಸುವ ಮತ್ತು ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಆಗ್ರಹಿಸಿದರು.
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಅಥಣಿ ಪಟ್ಟಣದ ಜೋಡು ಕೆರೆ ಅಭಿವೃದ್ಧಿಗೆ ಬಂದ ಹಣ ಹಿಂದುರುಗಿ ಹೋಗಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಸ್ಥಳಿಯ ಶಾಸಕರ ನಿರ್ಲಕ್ಷ ಎಂದರು.
ಇನ್ನೂ ಕಾಂಗ್ರೆಸ್ ಪಕ್ಷದಿಂದ ಕೆರೆ ಉಳಿಸಿ ಎಂಬ ಅಭಿಯಾನ ಮಾಡಲಾಗುತ್ತಿದ್ದು ಆದಷ್ಟು ಬೇಗ ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾವಸಾಬ ಐಹೋಳೆ, ವಿಲಿನ್ ಯಳಮಲ್ಲೆ, ಬವರಾಜ ಹಳದಮಳ, ಮಲ್ಲು ಬುಟಾಳಿ, ರಿಯಾಜ್ ಸನದಿ ಕಾಂಗ್ರೆಸ್ ಮುಖಂಡರಾದ ರವಿ ಬಡಕಂಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.