ಇತ್ತೀಚಿನ ಸುದ್ದಿ
ಅಥಣಿ: ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮಾಜಿ ಸಿಎಂ ಸಿದ್ದರಾಮಯ್ಯ ಅನಾವರಣ
19/12/2022, 19:31

ರಾಹುಲ್ ಅಥಣಿ ಬೆಳಗಾವಿ
info.reporter Karnataka@gmail.com
ಅಥಣಿಯ ಹಿರಿಯ ಮುಖಂಡ ಎಸ್. ಕೆ. ಬುಟಾಳಿ ಅವರು ಕೊಡುಗೆಯಾಗಿ ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು
ಲೋಕಾರ್ಪಣೆಗೊಳಿಸಿದರು.
ಪಟ್ಟಣದ ವಿಜಯಪುರ ರಸ್ತೆಗೆ ಹೊಂದಿಕೊಂಡ ಮೂರ್ತಿ ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯನವರು ರಾಯಣ್ಣನ ದೇಶಪ್ರೇಮ, ರಾಜನಿಷ್ಠೆಯನ್ನು ನಮ್ಮ ಯುವಜನತೆ ಮೈಗೂಡಿಕೊಳ್ಳಬೇಕು, ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದ ಎಸ್ ಕೆ ಬುಟಾಳಿ ಅವರ ಕೊಡುಗೆ ಈ ನಾಡಿಗೆ ದೊಡ್ಡದು ಎಂದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ ಬ ಪಾಟೀಲ, ಮುಖಂಡ ಸದಾಶಿವ ಬುಟಾಳಿ, ಬಸವರಾಜ ಬುಟಾಳಿ, ಪ್ರಭು ಚನ್ನಬಸವ ಮಹಾಸ್ವಾಮಿಗಳು, ಅಮರೇಶ್ವರ ಮಹಾಸ್ವಾಮಿಗಳು ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.