12:01 PM Tuesday16 - December 2025
ಬ್ರೇಕಿಂಗ್ ನ್ಯೂಸ್
ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್

ಇತ್ತೀಚಿನ ಸುದ್ದಿ

ಅಥಣಿ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಲಕ್ಷ್ಮಣ ಸವದಿ ಅಲ್ಲಿಂದಲೇ ಸ್ಪರ್ಧೆ: ಪುತ್ರ ಚಿದಾನಂದ ಸವದಿ ಸ್ಫೋಟಕ ಹೇಳಿಕೆ

12/03/2023, 10:53

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ತಂದೆಯಾದ ಲಕ್ಷ್ಮಣ್ ಸವದಿ ಅವರು ಅಥಣಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಮತಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೆ ಯಿಲ್ಲ ಎಂದು ಅವರ ಪುತ್ರ ಚಿದಾನಂದ ಸವದಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ ಗಚ್ಚಿನ ಮಠದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ವಿಶ್ವ ಮಹಿಳಾ ದಿನಾಚರಣೆ ಎಂಬುವುದು ಒಂದೇ ದಿನಕ್ಕೆ ಸೀಮಿತವಾಗಬಾರದು, ವೀರರಾಣಿ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಾವಿತ್ರಿಬಾಯಿ ಫುಲೆ ಅಂತಹಾ ಅನೇಕ ಮಹಿಳೆಯರಿಂದಲೇ ಸ್ವಾತಂತ್ರ, ದೇಶದಲ್ಲಿ ಸಾಕ್ಷರತೆ ಬಂದಿರುವುದು ಎಂದು ಸ್ಮರಣೆ ಮಾಡಬೇಕು ಎಂದು ಹೇಳಿದರು.

ಸದ್ಯದ ಕೆಲವು ರಾಜಕಾರಣಿಗಳು ಮಹಿಳೆಯರಿಗೆ ಅ ಗೌರವ ಸಲ್ಲಿಸಿ ನಾಯಿ, ನರಿ ಎಂದು ಅವರ ಮುಂದೆ ಶೆಡ್ಡು ಹೊಡೆಯುತ್ತಾರೆ ಇಂಥ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಹೇಳುತ್ತಾ ಪರೋಕ್ಷವಾಗಿ ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಪರವಾಗಿ ಬ್ಯಾಟಿಂಗ್ ಚಿದಾನಂದ ಸವದಿ ಬೀಸಿದ್ದಾರೆ.
ಹಾಗೂ ಈ ಕಾರ್ಯಕ್ರಮಕ್ಕೆ ನಮ್ಮ ತಂದೆಯವರೇ ಆಗಮಿಸಬೇಕಾಗಿತ್ತು, ಅನಿವಾರ್ಯ ಕಾರಣಗಳಿಂದ ಬರುವುದಕ್ಕೆ ಆಗಲಿಲ್ಲ ಈ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ತಂದೆಯವರು ಅಥಣಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ನಾವು ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ ಮಾಧ್ಯಮಗಳ ಮುಖಾಂತರ ಬಿಜೆಪಿ ವರಿಷ್ಠರಿಗೆ ನಾನು ಸಂದೇಶವನ್ನು ರವಾನಿಸಲು ಇಷ್ಟಪಡುತ್ತೇನೆ ಯಾವುದೇ ಕಾರಣಕ್ಕೂ ನಾವು ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ ನಿಮ್ಮ ಆಶೀರ್ವಾದ ಇರ್ಲಿ ಎಂದು ಜನರಲ್ಲಿ ಮನವಿ ಸಲ್ಲಿಸಿದರು.
ಐದು ವರ್ಷದ ಅಸಮಾಧಾನ ಸ್ಪೋಟ: ತೆರೆ ಮರೆ ಹಿಂದೆ ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟಗೆ ಲಕ್ಷ್ಮಣ್ ಸವದಿ ಹಾಗೂ ಮಹೇಶ್ ಕುಮಠಳ್ಳಿ ಇಬ್ಬರ ನಾಯಕರಲ್ಲಿ ಬಾರಿ ಕಿತ್ತಾಟ ನಡೆದಿದ್ದು ಇವತ್ತು ಅಸಮಾಧಾನ ಜ್ವಾಲಾಮುಖಿಯನ್ನು ಸವದಿ ಪುತ್ರ ಚಿದಾನಂದ ಸವದಿ ಸ್ಫೋಟ ಮಾಡಿದ್ದಾರೆ. ಆದರೆ ಹಲವು ಬಾರಿ ಮಾದ್ಯಮಗಳ ಮುಂದೆ ಲಕ್ಷ್ಮಣ್ ಸವದಿ ನಾನು ಟಿಕೆಟ್ ಆಕಾಂಕ್ಷಿ ಅಲ್ಲ, ೨೦೧೮ರಲ್ಲಿ ಸೋತರು ನನ್ನಗೆ ಪಕ್ಷ ಉಪಮುಖ್ಯಮಂತ್ರಿ ಸ್ಥಾನ ನೀಡಿದೆ ಎಂದು ಹೇಳಿದ್ದಾರೆ. ಇವತ್ತು ಚಿದಾನಂದ ಸವದಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ಗೋಕಾಕ್ ನಿಂದ ಸ್ವರ್ಧೆ ಮಾಡುವುದಿಲ್ಲ: ನಿನ್ನೆಯಷ್ಟೇ ರಮೇಶ ಜಾರಕಿಹೊಳಿ, ವಿಜಯಪುರ ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ನನ್ನನ್ನು ನಂಬಿ ಬಂದಿರುವ ಮಹೇಶ್ ಕುಮಠಳ್ಳಿಗೆ ಯಾವುದೇ ದ್ರೋಹ ಆಗೋಕೆ ಬಿಡುವುದಿಲ್ಲ, ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅವರಿಗೆ ನೀಡಲಾಗುವುದು, ಒಂದು ವೇಳೆ ನೀಡದಿದ್ದರೆ ನಾನು ಕೂಡ ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಆಪ್ತಮಿತ್ರನ ಬೆನ್ನಿಗೆ ನಿಂತು ರಮೇಶ್ ಜಾರಕಿಹೊಳಿ ಅವರು ಹೇಳಿಕೆ ನೀಡಿದರು. ರಮೇಶ ಜಾರಕಿಹೊಳಿ ಮಹೇಶ್ ಕುಮಠಳ್ಳಿ ಬೆನ್ನಿಗೆ ನಿಲ್ಲುತ್ತಿದ್ದಂತೆ ಇತ್ತ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ರಮೇಶ ಜಾರಕಿಹೊಳಿ ವಿರುದ್ಧ ಸಮರವನ್ನೇ ಸಾರಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು