ಇತ್ತೀಚಿನ ಸುದ್ದಿ
ಅಥಣಿ: ಅಗ್ನಿಶಾಮಕ ದಳ ಸಿಬ್ಬಂದಿಗಳ ತಾಸಿನ ಕಾರ್ಯಾಚರಣೆ; ಬಾವಿಗೆ ಬಿದ್ದ ಜರ್ಸಿ ಆಕಳು ಬಚಾವ್
27/08/2021, 21:54
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ತೆವರಟ್ಟಿ ಗ್ರಾಮದಲ್ಲಿ ಬಾವಿಗೆ ಬಿದ್ದ ಜರ್ಸಿ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳ ಒಂದು ತಾಸಿಗೂ ಅಧಿಕ ಕಾರ್ಯಾಚರಣೆಯಲ್ಲಿ ಬಚಾವ್ ಮಾಡಿದ್ದಾರೆ.
ಮಹಾದೇವ್ ತಮ್ಮಣ್ಣ ಖೋತ್ ಎಂಬವರ ಜರ್ಸಿ ಆಕಳು ಅವರದೇ ಆದ ಬಾವಿಗೆ ಬಿದ್ದಿತ್ತು.ಬಾವಿ ಪಕ್ಕದಲ್ಲಿ ಮೇಯಲು ಹೋದ ದನ ಆಕಸ್ಮಿಕ ಕಾಲು ಜಾರಿ ಬಾವಿಗೆ ಬಿದ್ದಿತ್ತು. ತಕ್ಷಣ ಅಥಣಿ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಲಾಯಿತು. ತಕ್ಷಣ ಜಲ ವಾಹನ ಹಾಗೂ ಸಿಬ್ಬಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿದರು. ಸುಮಾರು 30 x 40 ಅಳತೆಯ 90 ಪುಟ ಆಳವಿರುವ ಬಾವಿಯಲ್ಲಿ ಬಿದ್ದಿರುವ ಆಕಳನ್ನು ಸುಮಾರು ಒಂದು ತಾಸು ಇಪ್ಪತ್ತು ನಿಮಿಷಗಳ ಕಾಲ ಕಾರ್ಯಾಚರಣೆಯ ಬಳಿಕ ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಅನಿಲ್ ಬಡಚಿ (ಪ್ರಮುಖ ಅಗ್ನಿಶಾಮಕ ), ನೀಲಪ್ಪ ಹೇರವಾಡೆ (ಅಗ್ನಿಶಾಮಕ ಚಾಲಕ), ಅಗ್ನಿ ಶಾಮಕರಾದ ಶಿವಾನಂದ ಪೂಜಾರಿ, ಸಂಜೀವ ಚೌಗಲಾ, ರವೀಂದ್ರ, ಸಂಗಮ್, ಸುರೇಶ್ ಮಾದರ್ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.