12:31 AM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಅಥಣಿ: 12 ಅಡಿ ಆಳದ ಟ್ಯಾಂಕ್ ನಲ್ಲಿ ಕುಸಿದು ಬಿದ್ದ 3 ಪುರಸಭೆ ಸಿಬ್ಬಂದಿಗಳ ರಕ್ಷಣೆ

06/10/2022, 13:56

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ಪಟ್ಟಣದ ಉರ್ದು ಶಾಲೆಯ ಹತ್ತಿರ 12 ಅಡಿ ಆಳವಿರುವ ಚೆಂಬರನಲ್ಲಿ ಪೌಡರ್ ಸಿಂಪಡನೆ ಮಾಡಿ ಚೆಂಬರನ ವಾಲ್ ಬಂದ ಮಾಡಬೇಕೆಂದು ಟ್ಯಾಂಕನಲ್ಲಿ ಕೆಳಗಿಳಿದು ಕಾರ್ಯಚರಣೆಯನ್ನು ಮಾಡುವ ಸಂದರ್ಭದಲ್ಲಿ ಮೂವರು ಪುರಸಭೆ ಸಿಬ್ಬಂದಿಗಳಿಗೆ ಆಮ್ಲಜನಕ ಕೊರತೆಯಾಗಿ ಟ್ಯಾಂಕ್ ನಲ್ಲಿಯೇ ಕುಸಿದು ಬಿದ್ದಿವರನ್ನು ರಕ್ಷಣೆ ಮಾಡಿರುವ ಘಟನೆ‌ ನಿನ್ನೆ ಜರುಗಿದೆ.

ಟ್ಯಾಂಕ್ ಒಳಗೆ ಇಳಿದ ಸಿಬ್ಬಂದಿಗಳನ್ನು ಟ್ಯಾಂಕಿನ‌‌ ಮೇಲಿರುವ ಮತ್ತೋರ್ವ ಪುರಸಭೆ ಸಿಬ್ಬಂದಿ ಕುಮಾರ ಮಾಳಿ ಗಮನಿಸಿ ಖುದ್ದಾಗಿ ಠಾಣೆಗೆ‌ ಮಾಹಿತಿ‌ ನೀಡಿದ ನಂತರ ತಕ್ಷಣ ಅಥಣಿ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ಯಾಂಕನಲ್ಲಿ ಬಿದ್ದಿದ್ದ ಪ್ರಕಾಶ ಅಶೋಕ ಕುಂಬಾರ (35 ), ಅಪ್ಪಾಸಾಬ ಅಥಣಿಕರ(40), ರಮೇಶ ಪೂಜಾರಿ (42) ಎಂಬುವವರನ್ನು ಜೀವಂತವಾಗಿ ಟ್ಯಾಂಕನಿಂದ ಹೊರ ತೆಗೆದು ಜೀವಂತ ರಕ್ಷಣೆ ಮಾಡಿದರು.         


ಈ ರಕ್ಷಣಾ ಕಾರ್ಯಚರಣೆಯಲ್ಲಿ ರಾಜು ತಳವಾರ, ಎ.ಬಿ. ಬಡಚಿ, ಎಮ್.ಬಿ.ಬಿರಾದಾರ, ನೀಲಪ್ಪ ಹೇರವಾಡೆ, ಎಮ್.ಎಸ್. ಕುಂಬಾರ, ಸುರೇಶ ಮಾದರ, ಶಿವಪ್ಪ ಹಣಮಾಪೂರ, ರವೀಂದ್ರ ಸಂಗಮ, ಶಿವಾನಂದ ಶಿರಹಟ್ಟಿ,ಸಚೀನ ಹಲ್ಯಾಳ, ಶಿವಯ್ಯ ಮಠಪತಿ, ಸಂತೋಷ ಚೌಗುಲಾ, ಸಂತೋಷ ಧರ್ಮಟ್ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು