ಇತ್ತೀಚಿನ ಸುದ್ದಿ
ಅಶಕ್ತರಿಗೆ ಸಹಾಯ ಹಸ್ತ: ಬಿ.ಸಿ. ರೋಡ್ ನಲ್ಲಿ ವಿಭಿನ್ನ ಶೈಲಿಯ ‘ಶಾಂಭವಿ’ ನಾಟಕ ಪ್ರದರ್ಶನ
18/03/2023, 16:49

ಬಂಟ್ವಾಳ(reporterkarnataka.com):
ಕ್ಯಾನ್ಸರ್ ಹಾಗೂ ಅಶಕ್ತ ರೋಗಗಳಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ಬಿ.ಸಿ. ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಉಡುಪಿ ಜಿಲ್ಲೆಯ ಅಭಿನಯ ಕಲಾವಿದರ ಅಭಿನಯದ ವಿಭಿನ್ನ ಶೈಲಿಯ ‘ಶಾಂಭವಿ’ ನಾಟಕ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕಿನ 6 ಕುಟುಂಬಗಳಿಗೆ 30 ಸಾವಿರ ರೂ. ಧನ ಸಹಾಯ ನೀಡಲಾಯಿತು. ಪ್ರಮುಖರಾದ ಜಯಪ್ರಕಾಶ್, ಭರತ್ ಕುಮ್ಡೆಲು, ಉಮೇಶ್ ಕುಲಾಲ್, ಅಶೋಕ ಕುಮಾರ್ ಹೊಸಮಾರು, ಶರತ್ ಕುಮಾರ್, ಶಿವಾನಂದ ,ಯಶವಂತ ಬಿಸಿರೋಡು, ಹರೀಶ್ ಪೂಜಾರಿ ಜಕ್ರಿಬೆಟ್ಟು ಉಪಸ್ಥಿತರಿದ್ದರು.