4:11 PM Monday23 - February 2026
ಬ್ರೇಕಿಂಗ್ ನ್ಯೂಸ್
ಇಬ್ಬರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಸಹಿತ 4 ಮಂದಿ ಬಂಧನ: 12… ಯುವ ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆ ಕೇಳಲಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್… ಸಿದ್ದಾಪುರ: ವಾಹನಗಳ ಮೇಲೆ ಮುಂದುವರೆದ ಕಾಡಾನೆ ದಾಳಿ; ಕೂದಲು ಎಳೆ ಅಂತರದಲ್ಲಿ ಕಾರ್ಮಿಕರು… ಪಿರಿಯಾಪಟ್ಟಣದ ರಾಷ್ಟ್ರೀಯ ಹೆದ್ದಾರಿ 275 ನಲ್ಲಿ ಅರಣ್ಯ ಬೆಂಕಿಗೆ ಅಹುತಿ:ಅಪಾರ ಪ್ರಮಾಣದ ಬಿದಿರು… ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ವಾಹನ ಡಿಕ್ಕಿ: ಕಾಡುಕೋಣ ಕಾಲು ಮುರಿತ ಐರ್ಲೆಂಡ್‌ನಲ್ಲಿ ಕಡಬ ಕುಟ್ರುಪಾಡಿಯ ಯುವಕ ನಿಗೂಢವಾಗಿ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ… Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ… ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ

ಇತ್ತೀಚಿನ ಸುದ್ದಿ

ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗ್ತ ಇದೆ ಅರೆಸ್ಟ್ ಯುವಿಕಾ ಚೌಧರಿ ಟ್ಯಾಗ್:ಇದರ ಹಿಂದಿನ ಕಾರಣ ಏನು ಗೊತ್ತಾ ?

25/05/2021, 13:57

ಮುಂಬಾಯಿ (Reporter Karnataka News)

ಬಾಲಿವುಡ್ ಹಾಗೂ ಕಿರುತೆರೆಯ ನಟ ನಟಿಯರು ಯಾವುದಾದರೂ ಒಂದು ಕಾಂಟ್ರೋವರ್ಸಿಯನ್ನು ಮೈಮೇಲೆಳೆದುಕೊಂಡು ಸುದ್ದಿಯಾಗುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಮುನ್ ಮುನ್ ದತ್ತ ಅವರ ಮೇಲೆ ಇದೇ ರೀತಿ ಆರೋಪ ಕೇಳಿ ಬಂದಿತ್ತು. ಈಗ ಮತ್ತೊಬ್ಬ ನಟಿ ಯುವಿಕಾ ಚೌಧರಿ ತನ್ನ ವ್ಲಾಗ್(vlog)ನಲ್ಲಿ ಬಳಸಿದ ಒಂದು ಶಬ್ದದಿಂದಾಗಿ ಕಾಂಟ್ರೊವರ್ಸಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿ ಇರುವ ಯುವಿಕಾ ಚೌಧರಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, ಇದರಲಿ ಅವರ ಪತಿ ಪ್ರಿನ್ಸ್ ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳುತ್ತಿದ್ದು, ಯುವಿಕಾ ಮಾತಾಡುತ್ತಾ “ನಾನೂ ಯಾವಾಗಲೂ ಬಂದು ಭಂಗಿಯರ ಹಾಗೆ ನಿಂತುಕೊಳ್ಳುತ್ತೇನೆ” ಎನ್ನುವ ವಾಕ್ಯವನ್ನು ಬಳಸಿಕೊಂಡಿದ್ದಾರೆ.

ಇದು ಅನೇಕ ಮಂದಿಯ ಕೋಪವನ್ನು ನೆತ್ತಿಗೇರಿಸಿದ್ದು ಇದು ಜಾತೀಯತೆಯನ್ನು ಹಾಗೂ ಕೆಳಮಟ್ಟದ ಮನಸ್ಥಿತಿಯನ್ನು ತೋರಿಸುತ್ತದೆ. ನೈರ್ಮಲ್ಯ ಕೆಲಸವನ್ನು ಮಾಡುವ ಸಮುದಾಯವನ್ನು ತನ್ನ ವಿಡಿಯೋದಲ್ಲಿ ನಿಂದಿಸಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದು, ಈಗ #ArrestYuvikaChoudhary ಟ್ಯಾಗ್ ಟ್ರೆಂಡ್ ಆಗ್ತಾ ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು