7:42 AM Friday4 - July 2025
ಬ್ರೇಕಿಂಗ್ ನ್ಯೂಸ್
ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಆರಗ ಜ್ಞಾನೇಂದ್ರ ಶಾಸಕ ಸ್ಥಾನವನ್ನು ಗಿರವಿ ಇಟ್ಟಿದ್ದಾರಾ?; ಅವರನ್ನು ಆಯ್ಕೆ ಮಾಡಿದ್ದೆ ನಮ್ಮ ದುರಂತ: ಕಿಮ್ಮನೆ ರತ್ನಾಕರ್ ಆಕ್ರೋಶ

15/11/2024, 16:17

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಅರಗ ಜ್ಞಾನೇಂದ್ರರವರು 25 ವರ್ಷ ರಾಜಕೀಯದಲ್ಲಿದ್ದು ಅರಣ್ಯ ಇಲಾಖೆಯ ಜಾಗದಲ್ಲಿ ಮದ್ಯದ ಅಂಗಡಿ ಮಾಡಲು ಪ್ರತಿಭಟನೆ ಮಾಡ್ತಾರಲ್ಲ, ಅಂತಹ ವಿಷಯದಲ್ಲಿ ಶಾಸಕ ಸ್ಥಾನವನ್ನು ಅಡು(ಗಿರವಿ) ಇಡುವುದಾದರೆ ರಾಜೀನಾಮೆ ಕೊಟ್ಟು ಹೋಗಲಿ, ಇವರನ್ನು ಆಯ್ಕೆ ಮಾಡಿದ್ದೆ ನಮ್ಮ ದುರಂತ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.
ಶುಕ್ರವಾರ ಪಟ್ಟಣದ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,
ಮದ್ಯದಂಗಡಿ ಬಿಜೆಪಿಯವರಾದರೆ ಯಾರೇ ಸಾಯಲಿ ಅಥವಾ ಕಡೆಗೆ ಸಂಬಂಧಿಕರೇ ಸತ್ತರು ಪರವಾಗಿಲ್ಲ, ಇಂತಹ ಶಾಸಕರ ಅಗತ್ಯ ಕ್ಷೇತ್ರಕ್ಕೆ ಇದೆಯೇ? ಸಮಾಜಕ್ಕೆ ವಿವೇಕ ಹೇಳುವವರು ಹೀಗೆ ಮಾಡುತ್ತಾರ? ತಾಲೂಕಿನಲ್ಲಿ ಯಾರು ಮರಳು ಹೊಡೆಯುತ್ತಾರೆ ಎಂದು ಪ್ರತಿಯೊಬ್ಬರಿಗೂ ಮಾಹಿತಿ ಕೊಟ್ಟಿದ್ದೇನೆ, ಟ್ರಂಚ್ ಹೊಡೆದರೆ ಅದನ್ನು ತೆಗೆಸುತ್ತಾರೆ, ಇಂತಹ ಶಾಸಕರು ನಮಗೆ ಬೇಕಾ?
ಎಂದು ಪ್ರಶ್ನೆ ಮಾಡಿದರು.
ಆರಗ ಜ್ಞಾನೇಂದ್ರ ಜೊತೆ ಚರ್ಚೆ ಮಾಡಲು ನಾನು ಸಿದ್ದ, ನನ್ನ ಹಾಗೂ ಅವರ ಸಿದ್ದಾಂತದ ಬಗ್ಗೆ ಮಾತನಾಡೋಣ. ನನ್ನ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಹಾಗೂ ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ, ವಿರೋಧ ಪಕ್ಷದಲ್ಲಿ ಇದ್ದು ಸಹ ನಾನು 200 ಕೋಟಿ ಹಣ ತಂದಿದ್ದೇನೆ. ಹಾಗಾದರೆ ಇವರ ಕೈಲಿ ಯಾಕೆ ಹಣ ತರಲು ಸಾಧ್ಯ ಆಗುತ್ತಿಲ್ಲ? ಇವರ ನಡುವಳಿಕೆ ಸರಿಯಿಲ್ಲ, ಮೊದಲು ಅವರ ನಡುವಳಿಕೆ ಸರಿ ಮಾಡಿಕೊಳ್ಳಲಿ, ಅವರ ಮುಖದಲ್ಲಿ ದ್ವೇಷದ ಬಾವನೆ ಏನಿದೆ ಅದನ್ನು ಬದಲಾವಣೆ ಮಾಡಿಕೊಳ್ಳಬೇಕು. ಅವರು ನನಗಿಂತ ಮೊದಲು 15 ವರ್ಷ ಶಾಸಕರಾಗಿದ್ದರು ಆಗ ಏನು ಅಭಿವೃದ್ಧಿ ಮಾಡಿದ್ದರು, 25 ವರ್ಷದ ಅವರ ಸಾಧನೆ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಒಂದು ಘಟನೆ ನಾನು ಕೂಡ ಹತ್ತು ವರ್ಷಗಳ ಕಾಲ ಶಾಸಕನಾಗಿ ಇದ್ದಾಗ ಆಗಿದೆಯೇ? ಬುಕ್ಲಾಪುರದಲ್ಲಿ ಯಾರು ಮರಳು ಹೊಡೆಯುತ್ತಿರುವುದು? ಬಿಜೆಪಿಯವರು ಮರಳು ಹೊಡೆದರೆ ಅರಣ್ಯ ಇಲಾಖೆ ಅಥವಾ ಯಾವುದೇ ಜಾಗವಾಗಿರಲಿ ಮರಳು ಹೊಡೆಯಬಹುದೇ? ಇವರು ಮಾಡಿರುವ ಸಾಧನೆ ಏನು ಎಂದರೆ
ಮುಸ್ಲಿಂ ವಿಷಯ ಸಿಕ್ಕಿದರೆ, ನಂದಿತಾ ವಿಷಯದಲ್ಲಿ, ಕೋಮುಗಲಭೆ ವಿಷಯದಲ್ಲಿ ಗಲಾಟೆ ಮಾಡಿದ್ದಾರೆ ಹೊರತು ಮತ್ತೇನು ಮಾಡಿಲ್ಲ. ಕೊರೋನ ಸಂದರ್ಭದಲ್ಲಿ ತಬ್ಲಿಘಿಗಳಿಂದ ಕೊರೋನ ರೋಗ ಬಂತು ಎಂದು ಬಾಯಿ ಬಡಿದುಕೊಂಡರಲ್ಲ, ಇವರಿಗೂ ಎರಡು ಬಾರಿ ಕೊರೋನ ಬಂದಿತ್ತಲ್ಲ, ಇವರ್ಯಾಕೆ ತಬ್ಲಿಘಿ ಬಳಿ ಹೋಗಿದ್ದರು ಎಂದು ಪ್ರಶ್ನೆ ಮಾಡಿದರು.
ಇವರು ಎಲ್ಲಿಗೆ ಹೋದರೂ ಕೂಡ ಮೋದಿ, ಉಪನಯನ, ಕಾರ್ಯಕ್ರಮ, ಮಾಧ್ಯಮದವರು ಸೇರಿ ಯಾರ ಜೊತೆಗೂ ಮಾತನಾಡುವಾಗಲು ಮೋದಿ, ಮೋದಿ ಈ ದೇಶದಲ್ಲಿ ಬಿಜೆಪಿಯವರೆಲ್ಲರೂ ಪರಿಶುದ್ಧರೇ? ಇವರ ಪರಿಶುದ್ಧತೆಯನ್ನು ಇನ್ನು 15 ದಿನದಲ್ಲಿ ನಾನು ಬಹಿರಂಗ ಮಾಡುತ್ತೇನೆ, ಜ್ಞಾನೇಂದ್ರ ಅವರ ವಿರುದ್ಧ ದೊಡ್ಡ ಮಟ್ಟಿನ ಪ್ರತಿಭಟನೆ ಸದ್ಯದಲ್ಲೇ ಆಗಲಿದೆ. ಸಭೆಯಲ್ಲಿ ಮಾತನಾಡುವಾಗ ಅ
ಸಭೆಗೆ ಸಂಬಂಧಪಟ್ಟ ವಿಷಯ ಮಾತನಾಡಲು ಹೇಳಿ, ಮೋದಿ ಮೋದಿ, ಆರ್ ಎಸ್ ಎಸ್ ಅನ್ನುವ ಬದಲು ಕಾರ್ಯಕ್ರಮದ ಬಗ್ಗೆ ವಿಷಯ ಮಾತನಾಡಲು ಹೇಳಿ. ಅದು ಅವರಿಗೂ ಹಾಗೂ ಸಭೆಗೂ ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ಜಿ. ಎಸ್. ನಾರಾಯಣ ರಾವ್, ವಿಶ್ವನಾಥ್ ಶೆಟ್ಟಿ, ರಹಮತ್ ಉಲ್ಲಾ ಅಸಾದಿ, ರಾಘವೇಂದ್ರ ಶೆಟ್ಟಿ,ವಿಲಿಯಮ್ ಮಾರ್ಟಿಸ್, ಗೀತಾ ರಮೇಶ್, ಸುಶೀಲಾ ಶೆಟ್ಟಿ, ಶಬನಮ್, ರತ್ನಾಕರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು