ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನ ತಂಡದ ಅಗಸ್ಟ್ ತಿಂಗಳ ಸಹಾಯ ಧನ: ಗೀತಾ, ಬೇಬಿ ಜನೀಶ್ ಗೆ ಹಸ್ತಾಂತರ
03/09/2021, 19:04
ಮಂಗಳೂರು(reporterkarnataka.com);
ಆರದಿರಲಿ ಬದುಕು ಆರಾಧನ ತಂಡದ ಅಗಸ್ಟ್ ತಿಂಗಳ ಸಹಾಯ ಧನವನ್ನು ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿರುವ ದಕ್ಷಿಣ ಕನ್ನಡದ ಕರಿಯಂಗಳ ಪೊಳಲಿಯ ಗೀತಾ ಮಹಾಬಲ ಪೂಜಾರಿ ಅವರಿಗೆ ಹಾಗೂ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಕರುನಾಡ ಕಂದ ಜನೀಶ್ ಅವರಿಗೆ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಆರದಿರಲಿ ಬದುಕು ಸದಸ್ಯರಾದ ರಾಕೇಶ್ ಪೊಳಲಿ, ಮೂಡುಬಿದರೆಯ ವಿಶೇಷ ಮಕ್ಕಳ ಸ್ಫೂರ್ತಿ ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ. ಶೆಟ್ಟಿ ಗಾರ್, ಪದ್ಮಶ್ರೀ ಭಟ್ ನಿಡ್ಡೋಡಿ ಹಾಗೂ ಮಹಾಬಲ ಪೂಜಾರಿ, ನವೀನ್ ಪುತ್ತೂರು, ದೇವಿ ಪ್ರಸಾದ್ ಶೆಟ್ಟಿ, ಅಭಿಷೇಕ್ ಶೆಟ್ಟಿ ಐಕಳ, ನಾಗರಾಜ ಶೆಟ್ಟಿ ಅಂಬೂರಿ, ಶ್ರೀನಿವಾಸ ಬಜಪೆ, ರಂಗನಾಥ್ ಪಕ್ಷಿಕೆರೆ, ಶ್ರಿನಾಗ ಭಟ್, ವಿವೇಕ್ ಪ್ರಭು,ಧನಂಜಯ ಶೆಟ್ಟಿ, ಲಿಲೇಶ್ ಶೆಟ್ಟಿಗಾರ್, ಗಣೇಶ್ ಪೈ, ದಿವಾಕರ ಪೂಜಾರಿ, ನಿಲೇಶ್ ಕಟೀಲು ಉಪಸ್ಥಿತರಿದ್ದರು.














