ಇತ್ತೀಚಿನ ಸುದ್ದಿ
Mangaluru | ಬಪ್ಪನಾಡು ಬಳಿ ಸೇತುವೆಯಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ
07/11/2025, 09:53
ಮಂಗಳೂರು(reporterkarnataka.com): ಯುವಕನೊಬ್ಬ ಮೂಲ್ಕಿ ಬಪ್ಪನಾಡು ಬಳಿಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಯುವಕನನ್ನು ಅಭಿಷೇಕ್ ಆಳ್ವ(28) ಎಂದು ಗುರುತಿಸಲಾಗಿದೆ. ಈತ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ ಅವರ ಹಿರಿಯ ಪುತ್ರ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












