ಇತ್ತೀಚಿನ ಸುದ್ದಿ
55 ವರ್ಷಗಳಿದ ತಲೆ ಮರೆಸಿಕೊಂಡಿದ್ದ ಹಳೆ ಆರೋಪಿ ಬಂಧನ: ದ.ಕ. ಜಿಲ್ಲೆಯ ಅತ್ಯಂತ ಹಳೆಯ ಪತ್ತೆಯಾಗದ ಪ್ರಕರಣ
20/09/2025, 22:19
ಮಂಗಳೂರು(reporterkarnataka.com): ಸುಮಾರು 55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಳೆಯ ಆರೋಪಿಯೊಬ್ಬನನ್ಮು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಗ್ರಾಮಾಂTVತರ ಪೊಲೀಸ್ ಠಾಣಾ Cr NO 32/1970 u/s 154,155 (2)MF Rules 1969 sec 86 of MF Act ( *LPC :2/1972)*
ಪ್ರಕರಣದಲ್ಲಿ LPC ವಾರಂಟ್ ಆರೋಪಿ ಕೇರಳ ರಾಜ್ಯದ
ಮಲಪುರಂ ಜಿಲ್ಲೆಯ ಸಿ. ಆರ್. ಚಂದ್ರನ್ (78) ಎಂಬಾತನು 55 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈತನನ್ನು ಕೇರಳ ರಾಜ್ಯದ ಕ್ಯಾಲಿಕಟ್ ನ ಪುಲ್ಲಿಕಲ್ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳಲ್ಲಿ ಅತ್ಯಂತ ಹಳೆಯ ಪ್ರಕರಣ ಇದಾಗಿದೆ.














