ಇತ್ತೀಚಿನ ಸುದ್ದಿ
Chikkamagaluru | ವಿವಿಧ ಚರ್ಚುಗಳಲ್ಲಿ ಮಾತೆ ಮರಿಯಮ್ಮನವರ ಹಬ್ಬಕ್ಕೆ ನೋವೆನಾ ಪ್ರಾರ್ಥನೆ
04/09/2025, 12:44
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸೆಪ್ಟೆಂಬರ್ 8ರಂದು ನಡೆಯಲಿರುವ ಮಾತೆ ಮರಿಯಮ್ಮನವರ ಹಬ್ಬ(ಹೊಸಕ್ಕಿ ಹಬ್ಬ)ಕ್ಕೆ ಮೂಡಿಗೆರೆ ತಾಲ್ಲೂಕಿನಾದ್ಯಂತ ವಿವಿಧ ಚರ್ಚುಗಳು ಒಂಬತ್ತು ದಿನಗಳ ನೊವೇನಾ ಪ್ರಾರ್ಥನೆ ಆರಂಭವಾಗಿದೆ. ಮೂಡಿಗೆರೆ ಸಂತ ಅಂತೋಣಿ ಚರ್ಚ್ ಸೇರಿದಂತೆ ಗೋಣಿಬೀಡಿನ ಕಸ್ಕೇಬೈಲ್,ಬಸ್ಕಲ್,ಬಣಕಲ್,ಕೊಟ್ಟಿಗೆಹಾರ,ಬಾಳೂರು,ಜಾವಳಿ,ಕೆಳಗೂರು, ಹಿರೇಬೈಲ್, ಕೂವೆ ಸೇರಿದಂತೆ ಹಲವೆಡೆ ಬಾಲಿಕ ಮರಿಯ ಪ್ರತಿಮೆಗೆ ಹೂ ಅರ್ಪಣೆ ಮಾಡಿ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಶೃದ್ಧಾಭಕ್ತಿ ಅರ್ಪಿಸಲಾಗುತ್ತಿದೆ.ಆಗಸ್ಟ್ 30ರಿಂದಲೇ ಒಂಬತ್ತು ದಿನಗಳ ಕಾಲ ಮರಿಯಮ್ಮನವರ ಜಯಂತಿ ಅಂಗವಾಗಿ ಈ ವಿಶೇಷ ನೊವೇನಾ ಆರಂಭಿಸಲಾಗಿದ್ದು ಹಬ್ಬದ ಪರವಾಗಿ ರಸಪ್ರಶ್ನೆಗಳು ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಿ ಹಬ್ಬದಂದು ಬಹುಮಾನ ನೀಡಲಾಗುತ್ತದೆ ಎಂದು ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರು ರೆ.ಫಾ.ವಿಲಿಯಂ ಬರ್ನಾರ್ಡ್ ತಿಳಿಸಿದ್ದಾರೆ.
ವಿವಿಧ ಚರ್ಚುಗಳಲ್ಲಿ ಮಕ್ಕಳು ಸೇರಿದಂತೆ ಕ್ರೈಸ್ತ ಭಕ್ತಾದಿಗಳು ಹೆಚ್ಚಾಗಿ ಸಮಾವೇಶಗೊಂಡು ತಟ್ಟೆಯಲ್ಲಿ ವಿವಿಧ ಹೂಗಳನ್ನು ತಂದು ಬಾಲಿಕ ಮರಿಯಗೆ ಅರ್ಪಿಸಿ ನೋವೆನಾ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ.














