10:31 PM Thursday6 - November 2025
ಬ್ರೇಕಿಂಗ್ ನ್ಯೂಸ್
Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ…

ಇತ್ತೀಚಿನ ಸುದ್ದಿ

Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ ಪತ್ತೆ

19/08/2025, 20:03

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnata@gmail.com

ಸೋಮವಾರಪೇಟೆ ಸಮೀಪದ ಪುಷ್ಪಗಿರಿ ಹೈಡೆಲ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಣಕೋಡು ಗ್ರಾಮದ ಚಿದಾನಂದ (27) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಭಾನುವಾರ ರಾತ್ರಿ ಚಿದಾನಂದನು ತಾನು ಕೆಲಸ ಮಾಡುತ್ತಿದ್ದ ಘಟಕದಲ್ಲಿಯೇ ನೀರಿಗೆ ಧುಮುಕಿದ್ದು, ಆ ಕ್ಷಣವನ್ನು ವಿದ್ಯುತ್ ಘಟಕದ ಸಿಸಿಟಿವಿ ಕ್ಯಾಮೆರಾಗಳು ಸೆರೆ ಹಿಡಿದಿವೆ. ಆತ್ಮಹತ್ಯೆ ಮಾಡಲು ಹೊರಟಿರುವುದಾಗಿ ತನ್ನ ಸ್ನೇಹಿತರಿಗೆ ಮೊಬೈಲ್ ಮೆಸೇಜ್ ಕಳುಹಿಸಿದ್ದಾನೆಂದು ವೃತ್ತ ನಿರೀಕ್ಷಕರದ ಮುದ್ದುಮಾದೇವ ತಿಳಿಸಿದ್ದಾರೆ.
ಸೋಮವಾರ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಜಲಾಶಯದಲ್ಲಿ ಹುಡುಕಾಟ ನಡೆಸಿದರೂ ಸುಳಿವು ದೊರಕಲಿಲ್ಲ. ಮಂಗಳವಾರ ಸ್ಥಳೀಯರು ತಾವೇ ಹುಡುಕಾಟ ಕೈಗೊಂಡು, ಮಧ್ಯಾಹ್ನ ವೇಳೆಗೆ ಘಟಕದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಮರದ ಬಡಕ್ಕೆ ಸಿಕ್ಕಿಕೊಂಡಿದ್ದ ಮೃತದೇಹವನ್ನು ಪತ್ತೆ ಹಚ್ಚಿದರು.
ನೀರಿನ ರಭಸವನ್ನು ಲೆಕ್ಕಿಸದೆ ಬೀದಳ್ಳಿ ಗ್ರಾಮದ ಯುವಕರಾದ ಪುಟ್ಟ, ಪ್ರವೀಣ್, ಕಿರಣ್, ರವಿ, ವಿನೋದ್, ದೀಕ್ಷಿತ್ ಹಾಗೂ ಗಿರೀಶ್ ಶೌರ್ಯ ತೋರಿಸಿ ಮೃತದೇಹವನ್ನು ದಡಕ್ಕೆ ತರಲು ಯಶಸ್ವಿಯಾದರು.
ಸ್ಥಳಕ್ಕೆ ತಲುಪಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು