11:48 AM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

Kodagu | ಸಿ & ಡಿ ಕೃಷಿ ಭೂಮಿ ಹಕ್ಕಿಗಾಗಿ ಸೋಮವಾರಪೇಟೆ ಸಂಪೂರ್ಣ ಬಂದ್: ರಸ್ತೆತಡೆ, ಮುತ್ತಿಗೆ

12/08/2025, 12:35

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಸಿ & ಡಿ ಕೃಷಿ ಭೂಮಿ ಹಕ್ಕಿಗಾಗಿ ಸೋಮವಾರಪೇಟೆ ಸಂಪೂರ್ಣ ಬಂದ್ -ರಸ್ತೆ ತಡೆ -ಮುತ್ತಿಗೆ ಸಿ ಮತ್ತು ಡಿ ಜಾಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂದುಕೊಳ್ಳುವoತೆ ಒತ್ತಾಯಿಸಿ ರೈತ ಹೋರಾಟ ಸಮಿತಿಯಿಂದ ಕರೆ ನೀಡಲಾಗಿರುವ ಸೋಮವಾರಪೇಟೆ ತಾಲ್ಲೂಕು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸೋಮವಾರಪೇಟೆ ಪಟ್ಟಣ್ಣದಲ್ಲಿ ಅಂಗಡಿ ಮುಂಗಟುಗಳು ಸಂಪೂರ್ಣ ಮುಚಲ್ಪತ್ತಿವೆ, ಎಲ್ಲಾ ಖಾಸಗಿ ಬಸ್ ಮತ್ತು ಆಟೋ ಟ್ಯಾಕ್ಸಿ ಗಳು ರಸ್ತೆಗೆ ಇಳಿದಿಲ್ಲ. ತಾಲ್ಲೂಕು ಕೇಂದ್ರದ ವಿವೇಕಾನಂದ ವೃತ್ತದಲ್ಲಿ ಸ್ಥಳೀಯರು ರಸ್ತೆಗೆ ಮರ ಅಡ್ಡ ಇಟ್ಟು ರಸ್ತೆಯಲ್ಲೇ ಅಡುಗೆ ತಯಾರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಇದರಿಂದ ವಾಹನ ಸವಾರರು ಮತ್ತು ಪ್ರತಿಭಟನೆ ನಡೆಸುತ್ತಿರುವವರ ನಡುವೆ ಮಾತಿನ ಚಕಮಕಿ ನಡೆದಿದೆ.

ಶನಿವಾರಸಂತೆಯಲ್ಲಿ ರೈತ ಹೋರಾಟಗಾರರು, ಕಾಫಿ ಬೆಳೆಗಾರರ ಸಂಘ, ವರ್ತಕರ ಸಂಘ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.ಶನಿವಾರ ಸಂತೆ ಮತ್ತು ಕೊಡ್ಲಿಪೇಟೆ ನಲ್ಲೂ ತಾಲ್ಲೂಕು ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು