ಇತ್ತೀಚಿನ ಸುದ್ದಿ
ರಿಲ್ಯಾಕ್ಸ್ ಮೂಡ್ನಲ್ಲಿ ದಸರಾ ಗಜಪಡೆ: ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ತಂಡ ಆಗಸ್ಟ್ 9ಕ್ಕೆ ಮೈಸೂರು ಅರಮನೆ ಎಂಟ್ರಿ
05/08/2025, 20:09
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಸೋಮವಾರ ಸಂಜೆ ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಿವೆ.
*ರಿಲ್ಯಾಕ್ಸ್ ಮೂಡ್ನಲ್ಲಿ ಗಜಪಡೆ:* ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆ ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದ್ದು, ದಸರಾ ಆನೆಗಳನ್ನು ನೋಡಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಇನ್ನು ಆಗಸ್ಟ್ 10ರ ಸಂಜೆ ಗಜಪಡೆ ಅರಮನೆ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಡಿಸಿಎಫ್ ಡಾ.ಪ್ರಭುಗೌಡ ಮಾಹಿತಿ ನೀಡಿದ್ದಾರೆ.
*ಮೊದಲ ಬಾರಿಗೆ ಸಂಜೆ ವೇಳೆ ಗಜಪಡೆಗೆ ಅರಮನೆಗೆ ಸ್ವಾಗತ:* ಸೋಮವಾರ ನಾಗರಹೊಳೆ ಸಮೀಪದ ವೀರನಹೊಸಹಳ್ಳಿಯಿಂದ ಗಜಯಪಣದ ಮೂಲಕ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ಮೂದಲ ತಂಡ ಮೈಸೂರಿಗೆ ಆಗಮಿಸಿದ್ದು, ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ತಂಗಿವೆ. ಈ ಆನೆಗಳಿಗೆ ದಸರಾದಲ್ಲಿ ಭಾಗವಹಿಸಿರುವ ಅನುಭವ ಇರುವ ಕಾರಣ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ.
ಮೊದಲ ಬಾರಿಗೆ ಸಂಜೆ ವೇಳೆ ಅರಮನೆಗೆ ಸ್ವಾಗತ: ಆಗಸ್ಟ್ 10ರಂದು ಸಂಜೆ 6:40 ರಿಂದ 7:20ರ ಶುಭ ಮಕರ ಗೋಧೋಳಿ ಲಗ್ನದಲ್ಲಿ ಜಯ ಮಾರ್ತಾಂಡ ದ್ವಾರದ ಮೂಲಕ ಗಜಪಡೆಯನ್ನು ಅರಮನೆಗೆ ಸಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ಇದೇ ಮೂದಲ ಬಾರಿಗೆ ಸಂಜೆ ವೇಳೆ ಗಜಪಡೆಯನ್ನು ಅರಮನೆಗೆ ಸ್ವಾಗತ ಮಾಡುತ್ತಿರುವುದು ವಿಶೇಷ ಎನ್ನಲಾಗಿದೆ.
*ಗಜಪಡೆಗೆ ಸ್ನಾನ ಮಾಡಿಸಿದ ಮಾವುತರು, ಕಾವಾಡಿಗರು:* ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಗೆ ಮಾವುತರು ಹಾಗೂ ಕಾವಾಡಿಗರು ಸ್ನಾನ ಮಾಡಿಸಿದರು. ಆನೆಗಳಿಗೆ ಭತ್ತ, ಹಸಿ ಹುಲ್ಲನ್ನು ಮೇವಾಗಿ ನೀಡಲಾಗುತ್ತಿದೆ. ಸದ್ಯ ಗಜಪಡೆ ಹಾಗೂ ಮಾವುತರು, ಕಾವಾಡಿಗರು ಮತ್ತವರ ಕುಟುಂಬಸ್ಥರು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
*ದೂರದಿಂದಲೇ ಗಜಪಡೆ ನೋಡಲು ಜನರಿಗೆ ಅವಕಾಶ:* “ಕಾಡಿನಿಂದ ನಾಡಿಗೆ ಆಗಮಿಸಿದ ಗಜಪಡೆಗೆ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಅವುಗಳ ರಕ್ತ ಪರೀಕ್ಷೆಯನ್ನು ಸಹ ಮಾಡಲಾಗಿದೆ. ಎಲ್ಲ ಆನೆಗಳು ಈ ಹಿಂದೆ ದಸರಾದಲ್ಲಿ ಭಾಗವಹಿಸಿರುವ ಕಾರಣ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದು, ದೂರದಿಂದಲೇ ಗಜಪಡೆಯನ್ನ ನೋಡಲು ಜನರಿಗೆ ಅವಕಾಶ ಮಾಡಿಕೊಡಲಾಗಿದೆ.
ಗಜಪಡೆಗೆ ಈ ಎಲ್ಲ ಆಹಾರ ನೀಡಲಾಗುತ್ತೆ: ಗಜಪಡೆಗೆ ಭತ್ತ, ಹುಲ್ಲು ಸೇರಿದಂತೆ ಸಾಮಾನ್ಯ ಆಹಾರವನ್ನ ನೀಡಲಾಗುತ್ತಿದೆ. ಆ.10 ರಂದು ಗಜಪಡೆ ಅರಮನೆ ಪ್ರವೇಶ ಮಾಡುವ ಸಾಧ್ಯತೆ ಇದೆ. ನಂತರ ತಾಲೀಮು ಆರಂಭಿಸಲಾಗುವುದು” ಎಂದು ಮೈಸೂರಿನ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭುಗೌಡ ತಿಳಿಸಿದರು.














