5:24 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

Vijayanagara | ಯೂರಿಯಾ ಕೃತಕ ಅಭಾವ ಸೃಷ್ಟಿಗೆ ಯತ್ನ: ಅಕ್ರಮ ದಾಸ್ತಾನು ಮಳಿಗೆಗಳ ಮೇಲೆ ರೈತರ ದಾಳಿ, ಪ್ರತಿಭಟನೆ

24/07/2025, 17:59

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿರುವ ಕೆಲವು ಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಸಾಕಷ್ಟು ದಾಸ್ತಾನಿದ್ದರೂ ಕೂಡ. ಖರೀದಿಗೆ ಬಂದಿದ್ದ ರೈತರಿಗೆ ದಾಸ್ತಾನಿಲ್ಲ ಎಂದು ಹಿಂದಿರುಗುವಂತೆ ಸೂಚಿಸುತ್ತಿದ್ದ ಮೂರು ಅಂಗಡಿಗಳ ಅಕ್ರಮ ದಾಸ್ತಾನು ಮಳಿಗೆಗಳ ಮೇಲೆ ರೈತ ಮುಖಂಡರು ದಾಳಿ ನಡೆಸಿದ್ದಾರೆ.


ಇದರೊಂದಿಗೆ ಗೊಬ್ಬರ ಮಾರಾಟಗಾರರಿಂದ ಅಕ್ರಮವಾಗಿ ದಾಸ್ತಾನು ಮಾಡಿದ್ದನ್ನು ಬಯಲಿಗೆಳೆದಿದ್ದಾರೆ. ನಂತರ ಅನಿವಾರ್ಯವಾಗಿ ಮಾರಾಟಗಾರರು , ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿರುವ ಘಟನೆ ಜರುಗಿದೆ. ಪ್ರಕರಣ ಕುರಿತು ಕರ್ನಾಟ ರಾಜ್ಯ ರೈತ ಸಂಘದ ಕೊಟ್ಟೂರು ತಾಲೂಕು ಪ್ರಧ‍ಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನರವರು ಮಾಹಿತಿ ನೀಡಿದ್ದಾರೆ. ರೈತ ಸಂಘದ ಪದಾಧಿಕಾರಿಗಳು ರೈತರು ಪ್ರಕರಣ ಬಯಲಿಗೆಳೆದಿದ್ದು , ಈ ಸಂದರ್ಭದಲ್ಲಿ ಪಿಎಸ್ಐ ಗೀತಾಂಜಲಿ ಶಿಂಧೆರವರ ನೇತೃತ್ವದಲ್ಲಿ ಪೊಲೀಸರು ರೈತರ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ. ಕೊಟ್ಟೂರು ಪಟ್ಟಣದ ಮೂರು ಗೊಬ್ಬರ ಮಾರಾಟಗಾರರು , ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಠಿಗೆ ಯತ್ನಿಸಿದರೆನ್ನಲಾಗಿದೆ. ವಿಷಯ ಮನವರಿಕೆ ಮಾಡಿಕೊಂಡ ರೈತ ಮುಖಂಡರು , ಅಂಗಡಿಗಳಿಗೆ ರೈತ ಮುಖಂಡರು ಪೊಲೀಸರ ನೆರೆವಿನೊಂದಿಗೆ ಮುತ್ತಿಗೆ ಹಾಕಿದ್ದಾರೆ. ಅವರು ಖುದ್ದು ಗೋದಾಮುಗಳನ್ನು ಪರಿಶೀಲಿಸಲಾಗಿ , ಸಾಕಷ್ಟು ಯೂರಿಯಾ ಗೊಬ್ಬರ ದಾಸ್ತಾನಿದ್ದು ಗೊಬ್ಬರವನ್ನು ಪತ್ತೆ ಹಚ್ಚಿದ್ದಾರೆ. ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಮುಂದಾಗಿದ್ದಾರೆ , ಕೆಲ ಹೊತ್ತಿನ ನಂತರ ಗೊಬ್ಬರ ಅಂಗಡಿಯವರು ತಮ್ಮ ತಪ್ಪಿನರಿವಾಗಿ ರೈತ ಮುಖಂಡರಲ್ಲಿ, ರೈತರಲ್ಲಿ ಘಟನೆಗೆ ಕ್ಷಮೆಯಾಚಿಸಿದ್ದು ದೂರು ದಾಖಲಿಸದಂತೆ ಮನವಿ ಮಾಡಿದ್ದಾರೆನ್ನಲಾಗಿದೆ. ಮುಖಂಡರು ಪ್ರಕರಣ ದಾಖಲಿಸುವಂತೆ ಅಧಿಕಾರಿಗೆ ಪಟ್ಟು ಹಿಡಿದಾಗ , ಅಧಿಕಾರಿಗಳು ಹೋರಾಟಗಾರರ ಮನ ಒಲಿಸಿದ್ದಾರೆ ಮತ್ತು ಗೊಬ್ಬರ ಮಾರಾಟಗಾರರಿಂದ , ನೆರೆದಿದ್ದ ರೈತರಿಗೆ ಗೊಬ್ಬರವನ್ನು ಮಾರಾಟಮಾಡಿಸಿದ್ದಾರೆ. ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪ್ರಧಾನ ಜಾರ್ಯದರ್ಶಿ , ಗುಡಿಯಾರ ಮಲ್ಲಿಕಾರ್ಜುನ ರವರು ಪತ್ರಕರ್ತರಿಗೆ ಅಧೀಕೃತ ಮಾಹಿತಿ ನೀಡಿದ್ದಾರೆ.
ಗೊಬ್ಬರ ಮಾರಾಟಗಾರರು ತಮ್ಮಲ್ಲಿ ಗೊಬ್ಬರ ಸಾಕಷ್ಟು ಇದ್ದರೂ ಕೂಡ , ಇಲ್ಲಾ ಎಂದು ರೈತರಿಗೆ ಹೇಳಿ ಹಿಂದಿರುಗುವಂತೆ ಸೂಚಿಸಿದ್ದಾರೆ. ಈ ಮೂಲಕ ರೈತರಿಗೆ ಗೊಬ್ಬರ ಮಾರಾಟಮಾಡದೇ ಅಭಾವ ಸೃಷ್ಟಿಸಿ ವಂಚಿಸುವ ಹಾಗೂ ಆ ಗೊಬ್ಬರವನ್ನು ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತನು ಮಾಡಿಟ್ಟು. ಗೊಬ್ಬರವನ್ನು ಕಾಳ ಸಂತೆಯಲ್ಲಿ , ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದಾರೆಂದು ಹೋರಾಟಗಾರರು ಆರೋಪಿಸಿದ್ದಾರೆ. ಈ ಕುತಂತ್ರ ನಡೆಸಿದ್ದ ಗೊಬ್ಬರ ಅಂಗಡಿ ಮಾಲೀಕರ ವಿರುದ್ದ , ರೈತರು ತಮ್ಮ ಮುಖಂಡರ ನೇತೃತ್ವದಲ್ಲಿ ಘೋಷಣೆಗಳನ್ನು ಕೂಗಿ. ಅಕ್ರಮ ಗೊಬ್ಬರ ದಾಸ್ತಾನು ಮಾಡಿದ್ದವರ ವಿರುದ್ಧ ದಿಕ್ಕಾರ ಘೋಷಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹರಾಳು ದೊಡ್ಡಬಸಪ್ಪ , ಬಂಗಿ ಹೊನ್ನೂರು ಸಾಬ್ , ಬಳಿಗನೂರು ಬಾಲಗಂಗಾಧರ , ಮತ್ತು ರೈತ ಸಂಘದ ಮುಖಂಡರು ಮತ್ತು ಸಿಪಿಐ ಎಮ್ಎಲ್ ಲಿಬುರೇಷನ್ ಪಕ್ಷದ , ಮುಖಂಡರು ರೈತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು