ಇತ್ತೀಚಿನ ಸುದ್ದಿ
ಕರ್ನಾಟಕ- ಕೇರಳ ರಾಜ್ಯ ಹೆದ್ದಾರಿ 36: ಗುಂಡಿಗಳದ್ದೇ ದರ್ಬಾರ್!; ಒಂದು ತಾಸಿನ ಪ್ರಯಾಣಕ್ಕೆ ಬೇಕು 2 ಗಂಟೆ!!
01/07/2025, 11:32
ಗಿರಿಧರ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕರ್ನಾಟಕ ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ಮಾಕುಟ್ಟ(ಕರ್ನಾಟಕ )-ಕಣ್ಣೂರು (ಕೇರಳ ) ನಡುವಿನ SH-36 ಸಾಕ್ಷಾತ್ ನರಕದ ದರ್ಶನ ತೋರುತ್ತಿದೆ, ಪೆರಂಬಾಡಿ ಯಿಂದ ಮಾಕುಟ್ಟ ತೆರಳುವ ಕಡಿದಾದ ದಾರಿಯಲ್ಲಿ ರಸ್ತೆಯನ್ನು ಹುಡುಕಿಕೊಂಡು ವಾಹನಗಳು ಸಂಚಾರ ಮಾಡುವ ಅನಿವಾರ್ಯತೆ ಉಂಟಾಗಿದೆ.
ಕೊಡಗು ಜಿಲ್ಲೆಗೆ ಕಣ್ಣೂರು ಎರ್ಪೋರ್ಟ್ ಸಮೀಪದಲ್ಲೇ ಇದ್ದರೂ ಇಲ್ಲಿಗೆ ತೆರಳುವುದಕ್ಕೆ ಒಂದು ಗಂಟೆ ಸಂಚಾರಕ್ಕೆ, ಹೆಚ್ಚುವರಿ1 ಗಂಟೆ ಅಧಿಕ ತಗಲುತ್ತಿದೆ, ಇನ್ನೂ ಅಪಘಾತ, ಜೋರು ಮಳೆ ಇದ್ದಾರಂತೂ ಒಮ್ಮೆ ಗಡಿ ದಾಟಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ಹರಸಾಹಸ ಪಡಬೇಕಾದ ಅನಿವಾರ್ಯ ಇದೆ. ದಿನನಿತ್ಯ ಕೇರಳ ದಿಂದ ಆಗಮಿಸುವ ಪ್ರವಾಸಿಗರು, ಸರಕು, ಹಣ್ಣು ತರಕಾರಿ ಸಾಗಿಸುವ ವಾಹನಗಳು ಅಂತೂ ಹಿಡಿಶಾಪ ಹಾಕ್ಕೊಂಡೆ ಸಂಚಾರಿಸುತ್ತಿದ್ದಾರೆ.














