ಇತ್ತೀಚಿನ ಸುದ್ದಿ
ಜುಲೈ 9, 10: ಎಂ. ಚಂದರಗಿ ಹಿರೇಮಠದಲ್ಲಿ ಗುರು ಪೂರ್ಣಿಮೆ ನಿಮಿತ್ಯ ಗುರುಭಕ್ತರ ಸಮಾವೇಶ
30/06/2025, 23:07
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಎಂ ಚಂದರಗಿ ಶ್ರೀ ಗುರು ಗಡದೇಶ್ವರ ಸಂಸ್ಥಾನ ಹಿರೇಮಠದಲ್ಲಿ ಪ್ರತಿ ವರ್ಷ ಪದ್ಧತಿಯಂತೆ ಈ ವರ್ಷವೂ ಶ್ರೀಗುರು ಗಡದೇಶ್ವರ ಕಲ್ಯಾಣ ಫೌಂಡೇಶನ್ ಹಿರೇಮಠ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 9 ಹಾಗೂ 10ರಂದು ಗುರುಪೂರ್ಣಿಮೆ ನಿಮಿತ್ಯ ಗುರುಭಕ್ತರ ಸಮಾವೇಶ ಕಾರ್ಯಕ್ರಮ ಜರಗುವುದು.



ತಪೋಭೂಷಣ ಶಿವಾಚಾರ್ಯರತ್ನ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಕಟಕೋಳ ಎಂ. ಚಂದರಗಿ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಶ್ರೀ ಜಗದ್ಗುರು ರೇಣುಕ ಶ್ರೀ ಪ್ರಶಸ್ತಿ ಹಾಗೂ ಶ್ರೀ ಗುರು ಗಡದೇಶ್ವರ ಸದ್ಭಾವನಾ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಬುಧುವಾರ ದಿನಾಂಕ 9-7-2025ರಂದು ಬೆಳಗ್ಗೆ 7 ಗಂಟೆಗೆ ಭಕ್ತರಿಗೆ ಲಿಂಗ ದೀಕ್ಷೆ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಅಥಣಿ ತಾಲೂಕಿನ ಸತ್ತಿ ಗ್ರಾಮದ ಸರ್ವಧರ್ಮ ಸದ್ಭಕ್ತರಿಂದ ಶ್ರೀಮಠಕ್ಕೆ ಪಾದಯಾತ್ರೆ ಮತ್ತು ಮಂಗಲೋತ್ಸವ ಜರುಗಲಿದೆ.
ಶ್ರೀ ಅಪ್ಪಾಜಿ ಸಾಹೇಬ್ ದುಂ ಗಂಗಪ್ಪನವರ್ ಶ್ರೀ ಸುನಿಲ್ ದುಂ ಗಂಗಪ್ಪನವರ ಇವರಿಂದ ಭಕ್ತರಿಗೆ ಬೆಳಗ್ಗೆ ಪ್ರಸಾದ ಸೇವೆ ನೆರವೆರುವುದು ಮತ್ತು
ಸಾಯಂಕಾಲ 5:00 ಗಂಟೆಗೆ ಧರ್ಮಸಭೆ ಕಾರ್ಯಕ್ರಮ ಜರುಗುವುದು.
ಶಿವಾಚಾರ್ಯರತ್ನ ಶ್ರೀ ಷ.ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಕಟಕೋಳ ಎಂ. ಚಂದರಗಿ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು. ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಹುಕ್ಕೇರಿ ಬೆಳಗಾವಿ ಹಾಗೂ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ನರಸಾಪುರ ಸಾನಿಧ್ಯ ವಹಿಸುವರು.
ಶ್ರೀ ಷ.ಬ್ರ. ರೇಣುಕ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಬಿಜಿಗುಪ್ಪಿ ಢವಳೇಶ್ವರ ಹರ್ಲಾಪುರ ಇವರ ಅಮೃತ ಹಸ್ತದಿಂದ ಶ್ರೀ ಡಾ ವೀರ ಸೋಮೇಶ್ವರ ಪ್ರಶಸ್ತಿ ಪ್ರಧಾನ ಮಾಡುವರು.
ಡಾ.ಶ್ರೀಷ.ಬ್ರ. ಶಿವಲಿಂಗ ಮುರಘ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಬಾಗೋಜಿ ಕೊಪ್ಪ ಮುನ್ನಾಳ ಸರ್ವ ಧರ್ಮ ಸದ್ಭಕ್ತರಿಗೆ ಉಪದೇಶ ನೀಡುವರು ಧರ್ಮದರ್ಶಿ ಡಾ. ಶ್ರೀ ಚಂದ್ರಶೇಖರ ಸ್ವಾಮಿಗಳು ಹಿರೇಮಠ ಲೋಕಾಪುರ ವೇ.ಮೂ.ಡಾ.ಶ್ರೀ ಕಲ್ಮೇಶ್ವರ ಸ್ವಾಮಿಗಳು ಹಿರೇಮಠ ಚಿಪ್ಪಲಕಟ್ಟಿ ಶ್ರೀ ರೇಣುಕ ಗಡದೇಶ್ವರ ದೇವರು ಸಂಸ್ಥಾನ ಹಿರೇಮಠ ಕಟಕೋಳ ಎಂ.ಚಂದರಗಿ ಶಾಖೆ ಬರದ್ವಾಡ ಶ್ರೀ ರುದ್ರಮುನಿ ದೇವರು ಹಿರೇಮಠ ಮಾವಿನಕಟ್ಟಿ ನೇತೃತ್ವ ವಹಿಸಿವರು.
ಕರ್ನಾಟಕ ಸರಕಾರದ ಮುಖ್ಯ ಸಚೇತರು ರಾಮದುರ್ಗ ತಾಲೂಕ ಶಾಸಕರು ಅಶೋಕ ಮಾ. ಪಟ್ಟಣ ಈ ಕಾರ್ಯಕ್ರಮವನ್ನು ಉದ್ಘಾಟಿಸುವರು
ಗುರುವಾರ ದಿನಾಂಕ 10.07.2025 ರಂದು ಪ್ರಾತಕಾಲ 6:00ಗೆ ಶ್ರೀ ಕರ್ತೃಗಧಿಗೆ ಹಾಗೂ 108 ಶಿವಲಿಂಗಗಳಿಗೆ ಮಹಾ ರುದ್ರಭಿಷೇಕ ಹಾಗೂ ಪೂಜ್ಯ ಗುರುಗಳ ಹಾಗೂ ಭಕ್ತರ ಸಾಮೂಹಿಕ ಶಿವಪೂಜೆ ಮತ್ತು ಸಹಸ್ರ ಬಿಲ್ವಾರ್ಚನೆ ಶ್ರೀಗಳ ಸಮ್ಮುಖದಲ್ಲಿ ಧರ್ಮಸಭೆ ಕಾರ್ಯಕ್ರಮ ಜರಗುವುದು.
ಈ ಕಾರ್ಯಕ್ರಮಕ್ಕೆ ನಾಡಿನ ಹರ ಗುರು ಚರಮೂರ್ತಿಗಳು ರಾಜಕೀಯ ಧುರೀಣರು ಮತ್ತು ಶ್ರೀಮಠದ ಶಿಷ್ಯ ವೃಂದದವರು ಸರ್ವಧರ್ಮ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಶ್ರೀಗಳ ಆಶೀರ್ವಾದ ಪಡೆದು ತನು ಮನ ಧನ ಸೇವೆ ಸಲ್ಲಿಸಿ ಶ್ರೀಗಳ ಕೃಪಾ ಆಶೀರ್ವಾದ ಪಡೆದು ಪುನೀತ ರಾಗಬೇಕೆಂದು ಶ್ರೀ ಮಠದ ಆಡಳಿತ ಅಧಿಕಾರಿಯಾದ ಶ್ರೀ ಡಿ.ಯಾವ್.ಮಾಢಳ್ಳಿ ತಿಳಿಸಿದ್ದಾರೆ.














