8:18 PM Thursday6 - November 2025
ಬ್ರೇಕಿಂಗ್ ನ್ಯೂಸ್
Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ…

ಇತ್ತೀಚಿನ ಸುದ್ದಿ

ಮಂಗಳೂರು ಬಿಷಪ್ ಅ। ವಂ। ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ಈಸ್ಟರ್ ಹಬ್ಬದ ಶುಭ ಸಂದೇಶ

19/04/2025, 19:17

ಈಸ್ಟರ್ ಹಬ್ಬದ ಈ ಪವಿತ್ರ ಸಂದರ್ಭದಲ್ಲಿ, ಯೇಸು ಕ್ರಿಸ್ತರು ಮರಣವನ್ನು ಜಯಿಸಿ ಪುನರುತ್ಥಾನರಾದ ಸಂತೋಷವನ್ನು ನಾವು ಆಚರಿಸುತ್ತೇವೆ. ಶಿಲುಬೆಯ ಮೇಲೆ ಅವರ ತ್ಯಾಗ ಮತ್ತು ಪುನರುತ್ಥಾನವು ನಮಗೆ ಆಶಾಕಿರಣವನ್ನು, ಕ್ಷಮೆಯನ್ನು ಮತ್ತು ದೇವರ ಶಾಶ್ವತ ಪ್ರೀತಿಯನ್ನು ತೋರಿಸುತ್ತದೆ. ಕ್ರಿಸ್ತರು ಮ್ರತ್ಯುಂಜಯರಾದ ಆಚರಣೆಯ ಈ ಪವಿತ್ರ ಈಸ್ಟರ್ ಹಬ್ಬದ ನಿಮಿತ್ತ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು.
ಈಸ್ಟರ್ ಎಂದರೆ ವಿಜಯದ ಹಬ್ಬ – ಕೇಡಿನ ಮೇಲೆ ಸದ್ಗುಣಗಳ ಜಯ, ಅಸತ್ಯದ ಮೇಲೆ ಸತ್ಯದ ಜಯ, ಅಂಧಕಾರದ ಮೇಲೆ ಬೆಳಕಿನ ಜಯ, ಮರಣದ ಮೇಲೆ ಜೀವದ ಜಯ. ಯೇಸು ಕ್ರಿಸ್ತರು ತಮ್ಮ ಮರಣ ಮತ್ತು ಪುನರುತ್ಥಾನದ ಮೂಲಕ ನಮಗೆ ನವಜೀವನದ ದಾರಿ ತೋರಿಸಿದ್ದಾರೆ. ಅವರ ವಿಜಯದಲ್ಲಿ ನಾವು ಪಾಲುಗಾರರಾಗುವ ಮೂಲಕ, ನಮ್ಮ ಜೀವನದಲ್ಲಿ ಸತ್ಯ ಹಾಗು ಬೆಳಕಿನಲ್ಲಿ ನಡೆದು ಹೊಸ ಜೀವ ಪಡೆಯಬಹುದು.

ಈ ಈಸ್ಟರ್ ಸಮಯದಲ್ಲಿ ನಾವು ಸಹಾನುಭೂತಿ, ಕ್ಷಮೆ ಮತ್ತು ಪ್ರೀತಿಯ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಭರವಸೆ ಉಂಟುಮಾಡುವ ಸಂಕಲ್ಪವನ್ನು ಮಾಡೋಣ. ಕ್ರಿಸ್ತರು ತೋರಿಸಿದ ಮಾರ್ಗ ನಮ್ಮನ್ನು ನಡೆಸಲಿ. ನಾವು ಎಲ್ಲರಿಗೂ ದೇವರ ಪ್ರೀತಿಯ ಪ್ರತಿಬಿಂಬಗಳಾಗಿರೋಣ. ಒಗ್ಗಟ್ಟಿನಿಂದ, ದೇವರ ಕೃಪೆಯಲ್ಲಿ ನಾವು ಬೆಳೆಯುವ ಹಾಗು ನಮ್ಮ ಸುತ್ತಲಿನವರಿಗೆ ಶಾಂತಿ ಮತ್ತು ಸದ್ಭಾವನೆಯ ಸಂದೇಶವನ್ನು ಹಂಚಿಕೊಳ್ಳುವ.

ಇಂದು ಮತ್ತು ಸದಾ, ಕ್ರಿಸ್ತರ ಪುನರುತ್ಥಾನದ ಸಂತೋಷ ನಿಮ್ಮ ಕುಟುಂಬಗಳಿಗೆ ಆಶೀರ್ವಾದ ತರಲಿ ಎಂದು ಪ್ರಾರ್ಥಿಸುತ್ತೇನೆ.

ಅ। ವಂ। ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಧರ್ಮಾಧ್ಯಕ್ಷರು, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು