2:30 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

Mahashivaratri | ಮಹಾದೇವನ ಮಹೋತ್ಸವಕ್ಕೆ ಹುಬ್ಬಳ್ಳಿ ಸನ್ನದ್ಧ; ಭಕ್ತಿ ಸಂಗೀತ ಸುಧೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾರಥ್ಯ

25/02/2025, 23:09

*ದೇಶಪಾಂಡೆ ನಗರದ ಜಮಖಾನ ಮೈದಾನದಲ್ಲಿ ಶ್ರೀ ಕಾಶಿ ವಿಶ್ವನಾಥ ಮಾದರಿ ಶಿವಲಿಂಗ ಪ್ರತಿಷ್ಠಾಪನೆ*

ಹುಬ್ಬಳ್ಳಿ(reporterkarnataka.com): ವಾಣಿಜ್ಯ ನಗರಿ ಹುಬ್ಬಳ್ಳಿ ಈಗ ಮಹಾದೇವನ ಭಕ್ತಿ ವೈಭವದ ಮಹೋತ್ಸವಕ್ಕೆ ಸಿದ್ಧವಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸಂಸದರ ಅದ್ಧೂರಿ ಸಾಂಸ್ಕೃತಿಕ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದ ನಗರವಿಂದು ವಿಜೃಂಭಣೆಯ ಮಹಾಶಿವರಾತ್ರಿ ಧಾರ್ಮಿಕೋತ್ಸವಕ್ಕೆ ಸನ್ನದ್ಧವಾಗಿದೆ.
ನಗರದಲ್ಲಿ ಪ್ರತಿ ವರ್ಷದಂತೆ ಇಂದೂ ಮಹಾಶಿವರಾತ್ರಿ ಮಹೋತ್ಸವದ ವಿಶಿಷ್ಠ ಆಚರಣೆ ಜರುಗಲಿದೆ. ಕ್ಷಮತಾ ಸಂಸ್ಥೆ ಮತ್ತು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು ಕ್ಷೇತ್ರದ ಭಕ್ತರಿಗೆ ಈ ಬಾರಿ ಹುಬ್ಬಳ್ಳಿಯಲ್ಲೇ ಶ್ರೀ ಕಾಶಿ ವಿಶ್ವನಾಥೇಶ್ವರ ದರ್ಶನಕೆ ವ್ಯವಸ್ಥೆ ಕಲ್ಪಿಸಿದ್ದಾರೆ.

*ಕಾಶಿ ವಿಶ್ವನಾಥ ಮಾದರಿ ಶಿವಲಿಂಗ:* ಹುಬ್ಬಳ್ಳಿ ದೇಶಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಭಕ್ತರಿಗೆ ಶ್ರೀ ಕಾಶಿ ವಿಶ್ವನಾಥೇಶ್ವರ ಮಾದರಿ ಶಿವಲಿಂಗ ದರ್ಶನವಾಗಲಿದೆ. ಮಹಾ ಶಿವರಾತ್ರಿ ಪ್ರಯುಕ್ತ ಹನ್ನೆರೆಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯಲ್ಲೇ ಶಿವಲಿಂಗ ಪ್ರತಿಷ್ಠಾಪನೆಗೆ ಸಚಿವ ಪ್ರಲ್ಹಾದ ಜೋಶಿ ಸಾಥ್ ನೀಡಿದ್ದಾರೆ.
ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಬುಧವಾರವಿಡೀ ಒಂದರ ಮೇಲೊಂದು ಶಿವನಾರಾಧನೆ, ಭಕ್ತಿ ಸಮರ್ಪಣೆ ಕಾರ್ಯಕ್ರಮ ಜರುಗಲಿವೆ. ಬೆಳಗ್ಗೆ ಮಹಾದೇವನಿಗೆ ವಿಶೇಷ ಪೂಜೆ – ಪುನಸ್ಕಾರಗಳು ನೆರವೇರಿದರೆ, ಸಂಜೆ ಬಳಿಕ ಪ್ರಸಿದ್ಧ ಕಲಾವಿದರಿಂದ ಭಕ್ತಿಸುಧೆ ಹರಿಯಲಿದೆ.

*ಸಂಗೀತ ಸುಧೆಯೊಂದಿಗೆ ಶಿವನಾಮ ಸ್ಮರಣೆ:* ಪ್ರಸಿದ್ಧ ಗಾಯಕರು ಮತ್ತು ಕಲಾವಿದರುಗಳಿಂದ ಸಂಜೆ 6 ಗಂಟೆಗೆ “ಸಂಗೀತದೊಂದಿಗೆ ಶಿವನಾಮ ಸ್ಮರಣೆ” ಆರಂಭಗೊಳ್ಳಲಿದೆ. ವಿದುಷಿ ಸುಜಾತ ಗುರುವ್ ಅವರು ಹಿಂದೂಸ್ತಾನಿ ಮತ್ತು ಶಾಸ್ತ್ರೀಯ ಸಂಗೀತ ನುಡಿಸುವರು. ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿಯ ಕಲಾವಿದರು “ಶಿವವಚನ ವಾಣಿ ನೃತ್ಯ” ಪ್ರದರ್ಶಿಸಲಿದ್ದಾರೆ.
ಈ ಶಿವನಾಮ ಸ್ಮರಣೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕನ್ನಡದ ಖ್ಯಾತ ಗಾಯಕರಾದ ಚೇತನ ನಾಯಕ ಹಾಗೂ ಸಿಂಚನ ದೀಕ್ಷಿತ ಅವರಿಂದ ಸಂಗೀತ ಸಂಜೆ ಹಾಗೂ ಹುಬ್ಬಳ್ಳಿಯ ಬ್ಯಾಂಡ್ ಕಲ್ಕಿ ತಂಡದಿಂದ ಸಂಗೀತ ಸುಧೆ ಕಾರ್ಯಕ್ರಮ ಮಹಾಶಿವರಾತ್ರಿಯ ಈ ಮಹೋತ್ಸವಕ್ಕೆ ಮೆರುಗು ನೀಡಲಿದೆ.
ಹುಬ್ಬಳ್ಳಿ–ಧಾರವಾಡ ಅವಳಿ ನಗರ ಹಾಗೂ ಸುತ್ತಮುತ್ತಲಿನ ಶಿವ ಸದ್ಭಕ್ತರು ಮಹಾಶಿವರಾತ್ರಿ ಮಹೋತ್ಸವದ ಈ ಧಾರ್ಮಿಕ ಮಹೋತ್ಸವದಲ್ಲಿ ಭಾಗಿಯಾಗಿ ಮಹಾಶಿವನ ಕೃಪೆಗೆ ಪಾತ್ರರಾಗಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಕೋರಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು