11:43 PM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಮಂಗಳೂರು: ಜನವರಿ ತಿಂಗಳಾಂತ್ಯದಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟ

28/12/2024, 17:26

ಮಂಗಳೂರು(reporterkarnataka.com): ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಸಹ್ಯಾದ್ರಿ ಕಾಲೇಜಿನ ಮೈದಾನಲ್ಲಿ ಜನವರಿ ತಿಂಗಳಾಂತ್ಯದಲ್ಲಿ ಆಯೋಜಿಸಲಾಗುವುದು ಎಂದು ಆಯೋಜಕರು ಹೇಳಿದ್ದಾರೆ.
ಇದು ಟಿ20 ಫಾರ್ಮ್ಯಾಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು, ಫ್ರಾಂಚೈಸ್ ಆಧಾರಿತ ಟೂರ್ನಮೆಂಟ್ ಅಗಿದೆ. ಇದರಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಪ್ರತೀ ಫ್ರಾಂಚೈಸ್‌ಗೆ 16 ಆಟಗಾರರು ಇರಲಿದ್ದು, ಪ್ರತಿ ತಂಡವು 5 ಲೀಗ್ ಪಂದ್ಯಗಳನ್ನು ಆಡುತ್ತದೆ. ಪ್ರತಿ ಪೂಲ್‌ನಿಂದ ಟಾಪ್ 2 ತಂಡಗಳು ಸೆಮಿಫೈನಲ್‌ಗಾಗಿ ಅರ್ಹರಾಗುವರು. ಈ ಆಟ OTT ಪ್ಲ್ಯಾಟ್‌ಫಾರ್ಮ್ ಒಂದರಲ್ಲಿ ಬಿತ್ತರಗೊಳ್ಳಲಿದೆ. KSCA ಯಿಂದ ವೈಶಿಷ್ಟ್ಯಪೂರ್ಣ ಗುರುತಿನ ಸಂಖ್ಯೆಯು ಇರುವವರು ಮಾತ್ರ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ, ಕರ್ನಾಟಕ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಪಾಲ್ಗೊಂಡ 8 ಐಕಾನ್ ಆಟಗಾರರು ಆಡಲಿದ್ದಾರೆ. ನೋಂದಾಯಿತ ಆಟಗಾರರನ್ನು ಹರಾಜು ಪಟ್ಟಿಯಲ್ಲಿ ವಿಂಗಡಿಸಲಾಗುವುದು. ಒಂದು Under-19 ಆಟಗಾರ ಮತ್ತು ಎರಡು Under-23 ವಯೋಮಿತಿಯ ಆಟಗಾರರು ಪ್ಲೇಯಿಂಗ್ 11 ರ ತಂಡದಲ್ಲಿರಬೇಕು. ಪ್ರತಿ ದಿನ 3 ಪಂದ್ಯಗಳು. ಪ್ರೇಕ್ಷಕರು ಪ್ರವೇಶ ಶುಲ್ಕವಿಲ್ಲದೆ ಟೂರ್ನಮೆಂಟ್‌ ಅನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು.
ಮೊದಲ ಡಿವಿಷನ್ ಆಟಗಾರರು ಮಂಗಳೂರು ಝೋನ್ ಆಡಿದವರು ಕೆಟಗರಿ A ಯಲ್ಲಿ ಸೇರಿಸಲ್ಪಡುತ್ತಾರೆ. KSCA ಮಂಗಳೂರು ಝೋನ್ ಲೀಗ್‌ಗಳನ್ನು ಪ್ರತಿನಿಧಿಸಿದ ಆಟಗಾರರು, ಕಠಿನ ನಿಯಮಗಳು ಮತ್ತು ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಅನುಸರಿಸಲಾಗುವುದು. ಅದೇ ರೀತಿ ಕೆಟಗರಿ B ಯಲ್ಲಿ ದ್ವಿತೀಯ ಮತ್ತು ತೃತೀಯ ಡಿವಿಷನ್ ಆಟಗಾರರು KSCA ಮಂಗಳೂರು ಝೋನ್ ಲೀಗ್‌ಗಳನ್ನು ಪ್ರತಿನಿಧಿಸಿದ ಆಟಗಾರರು ಆಗಿರಬೇಕು.
ಆಟಗಾರರು ಮತ್ತು ಮಂಡಳಿಯ ನಡುವೆ ಅಗ್ರಿಮೆಂಟ್ ಕಡ್ಡಾಯವಾಗಿದೆ, KSCA ಆಡಳಿತ ನಿಯಮಾವಳಿಗಳ ಅಡಿಯಲ್ಲಿ ಟೂರ್ನಮೆಂಟ್ ನಡೆಯಲಿದೆ.

ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರ, ಟೂರ್ನಮೆಂಟ್‌ನ ಅತ್ಯುತ್ತಮ ಕ್ಯಾಚ್, ಪರ್ಪಲ್ ಕ್ಯಾಪ್, ಆರಂಜ್ ಕ್ಯಾಪ್, Under-23 ಶ್ರೇಣಿಯ ಅತ್ಯುತ್ತಮ ಎಮರ್ಜಿಂಗ್ ಆಟಗಾರ ಹೀಗೆ ಹಲವಾರು ಪ್ರಶಸ್ತಿಗಳು ಇವೆ. KSCA ಪ್ರಮಾಣಿತ ಮ್ಯಾಚ್ ಅಧಿಕೃತರನ್ನು ನೇಮಕ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೀರ್ತಿರಾಜ್ ರೈ (9741931062), ಶೈಖ್ ಮೊಹಮ್ಮದ್ ಅತಿಫ್ (9901683095), ಅಖಿಲೇಶ್ ಶೆಟ್ಟಿ (9594367713) ಇವರನ್ನು ಸಂಪರ್ಕಿಸಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು