ಇತ್ತೀಚಿನ ಸುದ್ದಿ
ದಕ್ಷಿಣ ಕನ್ನಡ ಅನುದಾನಿತ ಪ.ಪೂ. ಕಾಲೇಜುಗಳ ಬೋಧಕ-ಬೋಧಕೇತರ ಸಂಘದಿಂದ ಬಂಟ್ವಾಳ ಶಾಸಕರ ಭೇಟಿ
09/12/2024, 21:05
ಬಂಟ್ವಾಳ(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಅನುದಾನಿತ ಪ.ಪೂ.ಕಾಲೇಜುಗಳ ಬೋಧಕ-ಬೋಧಕೇತರ ಸಂಘದ ವತಿಯಿಂದ ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯಕ್ ಅವರನ್ನು ಅವರ ಒಡ್ಡೂರು ಫಾರ್ಮ್ಸ್ ನಿವಾಸದಲ್ಲಿ ಭೇಟಿ ಮಾಡಿ ಅನುದಾನಿತ ಪದವಿ ಪೂರ್ವ ಕಾಲೇಜು ನೌಕರರ ಸಮಸ್ಯೆಗಳನ್ನು ಮುಂಬರುವ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದು ಬಗೆಹರಿಸಲು ಮನವಿ ಸಲ್ಲಿಸಲಾಯಿತು.

ಈ ಕುರಿತು ಕಿಟ್ಟೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಠಲ್ , ಪೆರ್ನೆ ಶ್ರೀ ರಾಮಚಂದ್ರ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಶೇಖರ್ ರೈ, ತುಂಬೆ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ವಿ.ಎಸ್. ಭಟ್, ವಿಠಲ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಆದರ್ಶ , ಬಜಪೆ ಸೈಂಟ್ ಜೋಸೆಫ್ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ರಾಮಚಂದ್ರ ಉಡುಪ ಹಾಗೂ ಕಾಲೇಜುಗಳ ಎಲ್ಲಾ ಉಪನ್ಯಾಸಕರು,ಅಲ ನಿರಂಜನಸ್ವಾಮಿ ಕಾಲೇಜು ಸುಂಕದಕಟ್ಟೆ,ಶ್ರೀ ಸತ್ಯಸಾಯಿ ಕಾಲೇಜು ಅಳಿಕೆ ಇಲ್ಲಿನ ಹಾಗೂ ಎಡಪದವು ಪ.ಪೂ.ಕಾಲೇಜಿನ ಎಲ್ಲಾ ಸಿಬ್ಬಂದಿಗಳು ತಮ್ಮ ಸಮಸ್ಯೆಗಳ ಅಹವಾಲನ್ನು ತೋಡಿಕೊಂಡರು.
ಶಾಸಕರು ತಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ತಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.














