12:06 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಮಂಗಳೂರನ್ನು ರಾಜ್ಯದ 2ನೇ ನಗರವಾಗಿ ಅಭಿವೃದ್ಧಿಪಡಿಸುವ ಕನಸಿದೆ: ಗೃಹ ಸಚಿವ ಡಾ. ಪರಮೇಶ್ವರ್

30/11/2024, 20:12

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕೋಮುಶಕ್ತಿ ಸಮಾಜಕ್ಕೆ ಕಂಟಕ. ಯಾವುದೇ ಕಾರಣಕ್ಕೂ ಕೋಮುವಾದಿ ಶಕ್ತಿ ಬೆಳೆಯಲು ಅವಕಾಶ ಕೊಡಬೇಡಿ ಎಂದು ಈ ಹಿಂದೆ ಹೇಳಿದ್ದೆ. ಗೃಹ ಸಚಿನವಾಗಿ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದಾಗ, ಇಲ್ಲಿ ಕೋಮು ಶಕ್ತಿ ಹತ್ತಿಕ್ಕಲು ವಿಶೇಷ ವಿಂಗ್ ಮಾಡಿದ್ದೆ. ಅದು ಬಹಳಷ್ಟು ಯಶಸ್ವಿಯಾಗಿದೆ ಎಂಬ ನಂಬಿಕೆಯಿದೆ. ಈಗ ಕಮ್ಯುನಲ್ ಹಿಂಸೆ ಕಡಿಮೆಯಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.


ನಗರದ ಪಾಂಡೇಶ್ವರ ಪೊಲೀಸ್ ಲೇನ್ ನಲ್ಲಿ ನೂತನ ಪೊಲೀಸ್ ವಸತಿಗೃಹ ಉದ್ಘಾಟಿಸಿ ಅವರು ಮಾತನಾಡಿದರು.
ಕೋಮು ಶಕ್ತಿ ಹತ್ತಿಕ್ಕಲು ವಿಶೇಷ ವಿಂಗ್ ಮಾಡಿದ ಬಳಿಕ ಕಮ್ಯುನಲ್ ಹಿಂಸೆ ಕಡಿಮೆಯಾಗಿದೆ. ಈ ಭಾಗದಲ್ಲಿ ಶಾಂತಿ ನೆಲೆಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ ಮಂಗಳೂರಿಗೆ ವಿಶೇಷ ಸ್ಥಾನ ಇತ್ತು. ನಾವು ಘಟ್ಟದವರು ಬಹಳ ಅಭಿಮಾನ ಇಟ್ಟು ಬರುತ್ತಿದ್ದೆವು. ಹಾಗೆ ಮಂಗಳೂರನ್ನು ಕರ್ನಾಟಕದ ಎರಡನೇ ಸಿಟಿಯಾಗಿ ಮಾಡಬೇಕೆಂಬ ಕನಸು ಇದೆ. ಇಲ್ಲಿ ಗೋಲ್ಡನ್, ಡೈಮಂಡ್ ಜುವೆಲ್ಲರಿ ತಯಾರಿಸುವ ಎಸ್ಇಝೆಡ್ ಮಾಡಬೇಕೆಂದು ಪ್ರಣಾಳಿಕೆ ಇದೆ‌. ಇನ್ನೂ ಮೂರು ವರ್ಷ ಇದೆ, ಮಾಡುತ್ತೀವಿ ಎಂದು ಭರವಸೆ ವ್ಯಕ್ತಪಡಿಸಿದರು.
ಮೂರು ಬಾರಿ ಗೃಹ ಸಚಿವನಾಗಿದ್ದೇನೆ, ಬೇರೆ ಯಾರಿಗೂ ರಾಜ್ಯದಲ್ಲಿ ಇಂತಹ ಅವಕಾಶ ಸಿಕ್ಕಿಲ್ಲ. ಕೆಪಿಸಿಸಿ ಅಧ್ಯಕ್ಷನಾದಾಗ ಅದು ಆರು ತಿಂಗಳು ಅಷ್ಟೇ ಅಂತಿದ್ದರು.‌ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ.‌
ವೇದಿಕೆಯಲ್ಲಿ ಶಾಸಕ ಅಶೋಕ್ ರೈ, ಎಂಎಲ್ಸಿ ಐವಾನ್ ಡಿಸೋಜ, ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು