4:54 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷೆಯಾಗಿ ಶಂಭೂರಿನ ಪ್ರೇಕ್ಷಾ ಆಯ್ಕೆ

05/11/2024, 18:56

ಬಂಟ್ವಾಳ(reporterkarnataka.com): ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕ ವತಿಯಿಂದ ನಡೆಯುವ ಬಂಟ್ವಾಳ ತಾಲೂಕು 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಶಂಭೂರು ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಿರ್ಮಿಸಲಾಗುವ ರಾಮಚಂದ್ರ ರಾವ್ ಸಭಾಂಗಣದ ವಿ.ಮ ಭಟ್ ವೇದಿಕೆಯಲ್ಲಿ ನವೆಂಬರ್ 19ರಂದು ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಪ್ರೇಕ್ಷಾ ಆಯ್ಕೆಯಾಗಿದ್ದಾರೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಹೇಮಚಂದ್ರ ಭಂಡಾರದ ಮನೆ ಮತ್ತು ಪ್ರಧಾನ ಕಾರ್ಯದರ್ಶಿ ಜಯರಾಮ ಡಿ ಪಡ್ರೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರೇಕ್ಷಾ ಅವರು ಶಂಭೂರು ಗ್ರಾಮದ ಸೀನೆರೆ ಪಾಲು ಮೋಹಿನಿ ಮತ್ತು ಸುಣ್ಣಾಜೆ ದಿನೇಶ್ ಅವರ ದ್ವಿತೀಯ ಪುತ್ರಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿಯ ನಟ್ಟಿಬೈಲು ವೇದಶಂಕರ ನಗರದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ್ದಾರೆ. ನಂತರ ಶಂಭೂರು ಶಾಲೆಯಲ್ಲಿ ಐದನೇ ತರಗತಿಯಿಂದ ಕಲಿಕೆ ಮುಂದುವರಿಸುತ್ತಿದ್ದಾರೆ.
ಕಲಿಕೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಅವರು ಯಕ್ಷಗಾನದಲ್ಲಿಯೂ ವೇಷ ಮಾಡಿದ ಅನುಭವ ಗಳಿಸಿದ್ದಾರೆ. ಭಕ್ತಿಗೀತೆ ಮತ್ತು ದೇಶಭಕ್ತಿ ಗೀತೆಗಳ ಗಾಯನ ಇವರ ಮೆಚ್ಚಿನ ಹವ್ಯಾಸ. ಪ್ರತಿಭಾ ಕಾರಂಜಿಯ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿ ಕಳೆದೆರಡು ವರ್ಷಗಳಿಂದ ಬಹುಮಾನಿತರಾಗುತ್ತಿದ್ದಾರೆ. ಅವರು ಶಂಭೂರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ. ಕಡೆಶಿವಾಲಯದಲ್ಲಿ ಜರಗಿದ 17ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸ್ವರಚಿಸಿದ ಕವನ “ಬೆಳೆಸಿ ಉಳಿಸಿ” ಕವನವು ಆ ವರ್ಷದ ಸ್ಮರಣ ಸಂಚಿಕೆ “ಲಹರಿ” ಯಲ್ಲಿ ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ ಮತ್ತು ಸಹಪಾಠಿಗಳಿಗೆ ಪ್ರೇರಣೆ. ಶಾಲಾ ಪ್ರತಿಭಾ ದಿನೋತ್ಸವ, ಕ್ರೀಡಾ ಕೂಟಗಳಲ್ಲಿ ಅವರು ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಬಹುಮಾನ ಪಡೆಯುತ್ತಿರುವ ಸಾಧನಾ ಮುಖಿ. ಸಾಹಿತ್ಯದಲ್ಲಿ ಬೆಳೆಯಬೇಕಂಬ ಹಂಬಲ ಪ್ರೇಕ್ಷಾ ಅವರಿಗಿದೆ.
ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು, ಕಾರ್ಯದರ್ಶಿ ಪುಷ್ಪಾ ಎಚ್. ಅವರು ಪ್ರೇಕ್ಷಾ ಅವರನ್ನು ಅಭಿನಂದಿಸಿದ್ದು ಅವರ ಸರ್ವಾಧ್ಯಕ್ಷತೆಯಲ್ಲಿ ಶಂಭೂರಿನಲ್ಲಿ ಜರಗುವ ತಾಲೂಕು ಮಟ್ಟದ ಮಕ್ಕಳ ಹದಿನೆಂಟನೇ ಸಾಹಿತ್ಯ ಸಮ್ಮೇಳನವು ಯಶಸ್ಸುಗಳಿಸಲಿ ಎಂದು ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು