3:17 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಮೂಡಲಗಿ ಶ್ರೀ ಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು: ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

16/07/2024, 20:59

ಸಂತೋಷ್ ಬೆಳಗಾವಿ

info.reporterkarnataka@gmail.com

ಹಳ್ಳೂರ ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಿಂದ ಗ್ರಾಮದ ಸುಧಾರಣೆ ಹಾಗೂ ಶಿಸ್ತು, ಸಮಯ ಪ್ರಜ್ಞೆ, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಬೇಕೆಂದು ತಿಳಿಸಿಕೊಡುತ್ತದೆ ಎಂದು ಎಸ್.ಡಿ. ಗಾಣಿಗೇರ ಹೇಳಿದರು.
ಅವರು ಶಿವಾಪೂರ ಗ್ರಾಮದಲ್ಲಿ ಮೂಡಲಗಿ ಶ್ರೀ ಪಾದಬೋಧ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಎನ್ ಎಸ್ ಎಸ್ ಶಿಬಿರದಿಂದ ಸಮಾಜ , ದೇಶಕ್ಕೆ ಏನಾದರೆ ಕೊಡುಗೆ ನೀಡಬೇಕೆಂದು ತಿಳಿಸಿ ಕೊಡುತ್ತದೆಂದು ಹೇಳಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಎಲ್. ಬಬಲಿ ಮಾತನಾಡಿ ಗ್ರಾಮ ಸ್ವಚ್ಛತೆ ಹಾಗೂ ಅನೇಕ ರೀತಿಯ ಸರಕಾರದ ಸೌಲಭ್ಯಗಳು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಗ್ರಾಮ ಸುಂದರವಾಗಿ ಕಾಣಲು ಶಿಬಿರದಲ್ಲಿನ ವಿದ್ಯಾರ್ಥಿಗಳು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದರಿಂದ ಸಾಕಷ್ಟು ಗ್ರಾಮಕ್ಕೆ ಉಪಯೋಗವಾಗಿದೆಂದು ಹೇಳಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಿಂದ ಪಾಲ್ಗೊಳ್ಳುವುದರಿಂದ ಜೀವನ ನಡೆಸಲು ಸಹಕಾರಿಯಾಗುತ್ತದೆ. ಗಂಡು, ಹೆಣ್ಣು ಮೇಲು ಕೀಳು ಎಂಬ ಬೇಧ ಭಾವ ಮಾಡದೆ ಶಿಬಿರದಲ್ಲಿ ಭಾಗವಹಿಸಿ ಸಮಾಜ ಸೇವೆ ಮಾಡಲು ಸನ್ಮಾರ್ಗ ತೋರುವುದು. ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಕೂಡಾ ಮಾಡುತ್ತದೆ. ಭೂಮಿಗೆ ಬಿತ್ತಿದ ಬೀಜ ಗೊಬ್ಬರದಿಂದ ಬೆಳೆದ ಬೆಳೆಯ ಲಾಭದಂತೆ ಸಮಾಜ ಸೇವೆ ಮಾಡಿದರೆ ತಕ್ಕ ಪ್ರತಿ ಪಲ ಸಿಗುತ್ತದೆ. ಯುವಕರು ದುಶ್ಚಟಕೆ , ಅತಿಯಾದ ಮೊಬೈಲ್ ಬಳಕೆ ಮಾಡಿ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳದೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿತು ಮೇಧಾವಿಗಳಾಗಿರೆಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕರಾದ ಬಿ. ಎಸ್. ಕೇಸರಗೊಪ್ಪ ಮಾತನಾಡಿ ಗ್ರಾಮದಲ್ಲಿ ಏನ್ ಎಸ್ ಎಸ್ ಶಿಬಿರದಿಂದ ಮಹಿಳೆಯರ ಸಬಲೀಕರಣ, ಸಾವಯುವ ಕೃಷಿ ಪದ್ಧತಿ, ಪ್ಲಾಸ್ಟಿಕ್ ಮುಕ್ತ, ಸರಕಾರದ ಸೌಲಭ್ಯಗಳು ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಯಿತೆಂದು ನುಡಿದರು.
ವೇದಿಕೆಯಲ್ಲಿ ವಿಶೇಷವಾಗಿ ಮಾಜಿ ಸೈನಿಕರಿಗೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಮತ್ತು ಶಿಭಿರದ ಒಳ್ಳೆ ಕೆಲಸ ಮಾಡಿದ ಶಿಬಿರಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಿದರು. ಈ ಸಮಯದಲ್ಲಿ ಗ್ರಾಮ ಪಂಚಾಯತ್ ಉಪಾದ್ಯಕ್ಷ ಮಲ್ಲಪ್ಪ ಜುಂಜರವಾಡ. ಸದಸ್ಯರಾದ ಸಿದ್ದಪ್ಪ ತುಕ್ಕನ್ನವರ, ಪ್ರವೀಣ ಗೌಡ ಪಾಟೀಲ, ಎಲ್. ಬಿ. ಕಬ್ಬೂರ,ವಈಶ್ವರ ಸೀಳನ್ನವರ, ಮಲ್ಲಪ್ಪ ಸಾಯಣ್ಣವರ, ಸಂಜೀವ ಮಧುರಖಂಡಿ, ಮುಖ್ಯೋಪಾದ್ಯಯರಾದ ಎಂ. ಪಿ . ಲಂಗೋಟಿ, ಅಡವಯ್ಯ ನಂದಗಾಂವಮಠ, ಶಂಭಪ್ಪ ತುಕ್ಕಣ್ಣವರ, ಬಸವ್ವ ಪಾಟೀಲ.ಮಲ್ಲಪ್ಪ ಪೂಜೇರಿ, ಶಿವಾಜಿ ಮುಳಿಕ,ಬಶಿವರಾಜ ಮುಗಳಖೊಡ, ಸದಾಶಿವ ಹೊಸಮನಿ, ರೇವಣ ಪಾಟೀಲ, ಲಕ್ಕಪ್ಪ ಲೋಕನ್ನವರ, ಸಾವಿತ್ರಿ ಮದಲಮಟ್ಟಿ, ಸುಜಿತ ಗೋಲಬಾಂವಿ, ಲಕ್ಷ್ಮೀ ತೋಟಗಿ,ಬಐಶ್ವರ್ಯಾ ಕತ್ತಿ. ಲೋಹಿತ ನುಚ್ಚುಂಡಿ, ಸುಶ್ಮಿತಾ ಟಗರೆ, ಸಿದ್ರಾಮ ಪೂಜೇರಿ, ರುದ್ರವ್ವ ಬೆಳಗಲಿ, ಸ್ನೇಹಾ ಡೋಣಿ, ಹೊಳೆಪ್ಪ ಕೌಜಲಗಿ, ಪವನ ಅಂಗಡಿ, ಜಯಶ್ರೀ ಮಧಿಹಳ್ಳಿ, ಆನಂದ ಹೊಸಟ್ಟಿ
ಉಪಸ್ಥಿತರಿದ್ದರು.
ಪೂರ್ಣಿಮಾ ಡೋಂಗಿ ಸ್ವಾಗತಿಸಿದರು.ಲಕ್ಷ್ಮೀ ಹಿಪ್ಪರಗಿ ವಂದಿಸಿದರು.ಅಪರ್ಣಾ ಸಣ್ಣಕ್ಕಿ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು