ಇತ್ತೀಚಿನ ಸುದ್ದಿ
ತೆರೆಯ ಮರೆಗೆ ಸರಿದ ‘ಅಭಿನಯ ಶಾರದೆ’ : ಇಹಲೋಕ ತ್ಯಜಿಸಿದ ಚಿತ್ರ ರಂಗದ ಹಿರಿಯ ನಟಿ ಜಯಂತಿ
26/07/2021, 12:06
ReporterKarntaka.com
ಕನ್ನಡ ಚಿತ್ರರಂಗದ ಹಿರಿಯ ನಟಿ, ‘ಅಭಿನಯ ಶಾರದೆ’ ಎಂದೇ ಖ್ಯಾತರಾಗಿದ್ದ ನಟಿ ಜಯಂತಿ ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಜಯಂತಿ ಕಳೆದ ರಾತ್ರಿ ನಿಧನರಾಗಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದ ನಟಿ ಜಯಂತಿ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಸುಮಾರು 500 ಚಿತ್ರಗಳಲ್ಲಿ ನಟಿಸಿದ್ದ ಜಯಂತಿ, ‘ಅಭಿನಯ ಶಾರದೆ’ ಎಂದು ಅಭಿಮಾನದಿಂದ ಕರೆಸಿಕೊಂಡಿದ್ದರು. ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದರು.
1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದರು. ನಟಿ ಜಯಂತಿಯವರು ವಿಷ್ಣುವರ್ಧನ್, ಅಂಬರೀಷ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್, ಅನಂತ್ ನಾಗ್ ಮುಂತಾದ ನಟರ ಜೊತೆ ಅಭಿನಯಿಸಿದ್ದರು.














