12:27 AM Friday7 - November 2025
ಬ್ರೇಕಿಂಗ್ ನ್ಯೂಸ್
ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:…

ಇತ್ತೀಚಿನ ಸುದ್ದಿ

ಕೃಷ್ಣಾಪುರ: ಈದ್ಗಾ ಮಸೀದಿ ಮುಖ್ಯ ದ್ವಾರ ನಿರ್ಮಾಣ ಶಂಕುಸ್ಥಾಪನೆ, ವನಮಹೋತ್ಸವಕ್ಕೆ ಚಾಲನೆ

21/07/2021, 21:04

ಸುರತ್ಕಲ್(reporterkarnataka news); ತ್ಯಾಗ, ಬಲಿದಾನದ ಸಂಕೇತವಾದ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನ ಅಂಗವಾಗಿ ಬದ್ರಿಯಾ ಜುಮ್ಮಾ ಮಸೀದಿ ಕೃಷ್ಣಾಪುರ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮ ಹಾಗೂ ವಿಧಾನ ಪರಿಷತ್ತು ಸದಸ್ಯ ಬಿ.ಎಂ. ಫಾರೂಕ್ ಅವರ ವತಿಯಿಂದ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕೃಷ್ಣಾಪುರ ಈದ್ಗಾ ಮಸೀದಿಯ ಮುಖ್ಯ ದ್ವಾರದ  ಶಂಕು ಸ್ಥಾಪನೆಯು ಬುಧವಾರ ನೆರವೇರಿತು.

ವಿಧಾನ ಪರಿಷತ್ ಸದಸ್ಯ ಬಿ.ಎ. ಫಾರೂಕ್ ಅವರು ಶಂಕು ಸ್ಥಾಪನೆ ನೆರವೇರಿಸಿದರು‌. ಈ ಸಂದರ್ಭದಲ್ಲಿ ಕೃಷ್ಣಾಪುರ ಸಂಯುಕ್ತ ಜಮಾದ್ ನ ಅಲ್ ಹಾಜಿ ಇಬ್ರಾಹಿ೦ ಮುಸ್ಲಿಯಾರ್, ಕೃಷ್ಣಾಪುರ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಜಲೀಲ್ ಬದ್ರಿಯಾ,ಚೊಕ್ಕಬೆಟ್ಟು ಎಂ. ಜೆ. ಎಂ. ಖತೀಬರು ಅಝೀಝ್ ಧಾರ್ಮಿ, ಬದ್ರಿಯಾ ಜುಮ್ಮಾ ಮಸೀದಿ ಖತೀಬರು ಮೌಲಾನ ಉಮ್ಮರ್ ಫಾರೂಕ್ ಸಖಾಫಿ, ಮಾಜಿ ಶಾಸಕ ಡಾ. ಬಿ.ಎ . ಮೊಹಿಯುದ್ದೀನ್ ಬಾವಾ,ಶಂಶದ್ ಅಬೂಬಕ್ಕರ್,ಕೃಷ್ಣಾಪುರ ಈದ್ಗಾ ಮಸೀದಿ ಅಧ್ಯಕ್ಷ ಕೆ.ಎಚ್.ಅಹಮದ್


ಅಹಮ್ಮದ್, ಬದ್ರಿಯ ಜುಮ್ಮಾ ಮಸೀದಿ ಕಾರ್ಯದರ್ಶಿ ಎಸ್. ಎಮ್. ಹಮೀದ್,ಉದ್ಯಮಿ ಬಿ ಎಸ್ ಇಸ್ಮಾಯಿಲ್ ಹಾಗೂ ಕೃಷ್ಣಾಪುರ ಬದ್ರಿಯಾ ಮಸೀದಿ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಸ್ಲಿ೦ ಭಾಂದವವರು 
ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು